alex Certify ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ ಇ – ಪಾಸ್​ಪೋರ್ಟ್​: ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಶೀಘ್ರದಲ್ಲೇ ಬರಲಿದೆ ಇ – ಪಾಸ್​ಪೋರ್ಟ್​: ಕೇಂದ್ರ ವಿದೇಶಾಂಗ ಸಚಿವಾಲಯದಿಂದ ಮಾಹಿತಿ

ದೇಶದ ನಾಗರಿಕರು ಶೀಘ್ರದಲ್ಲಿಯೇ ಇ ಪಾಸ್​ಪೋರ್ಟ್​ಗಳನ್ನು ಹೊಂದಲಿದ್ದಾರೆ. ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸಂಜಯ್​ ಭಟ್ಟಾಚಾರ್ಯ ಟ್ವೀಟ್​ ಮೂಲಕ ಖಚಿತ ಮಾಹಿತಿ ನೀಡಿದ್ದಾರೆ.

ಇ ಪಾಸ್​ಪೋರ್ಟ್​ಗಳು ಬಯೋಮೆಟ್ರಿಕ್​ ಡೇಟಾವನ್ನು ಸುರಕ್ಷಿತಗೊಳಿಸುತ್ತವೆ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳಿಗೆ ಇ ಪಾಸ್​ಪೋರ್ಟ್​ಗಳನ್ನು ಅನುಗುಣವಾಗಿರುತ್ತವೆ. ಇ ಪಾಸ್​ಪೋರ್ಟ್​ಗಳನ್ನು ನಾಸಿಕ್​​ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್​ನಲ್ಲಿ ಉತ್ಪಾದಿಸಲಾಗುತ್ತದೆ.

ಹಲವಾರು ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ಪಾಸ್​ಪೋರ್ಟ್ ಹೊಂದಿರುವವರು ಬಯೋಮೆಟ್ರಿಕ್​ ಡೇಟಾ, ಹೆಸರು ಸೇರಿದಂತೆ ವಿವಿಧ ಪ್ರಮುಖ ಮಾಹಿತಿಗಳನ್ನು ಹೊಂದಲು ಇ ಪಾಸ್​ಪೋರ್ಟ್​ನಲ್ಲಿರುವ ಚಿಪ್​ನ್ನು ಎಂಬೇಡ್​ ಮಾಡಲಾಗುತ್ತದೆ. ಇದು ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್​ ಮೂಲಕ ಅನಧಿಕೃತ ಡೇಟಾ ವರ್ಗಾವಣೆಯನ್ನು ಅನುಮತಿಸದ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಮುಂದಿನ ಜನರೇಷನ್​​ ಇ ಪಾಸ್​ಪೋರ್ಟ್​ಗಳು ಬರಲಿವೆ. ಸುರಕ್ಷಿತ ಬಯೋಮೆಟ್ರಿಕ್​ ಡೇಟಾ, ಜಾಗತಿಕ ವಲಸೆ ಪೋಸ್ಟ್​ಗಳಿಗೆ ಇದು ಸುಗಮ ಮಾರ್ಗವಾಗಿದೆ. ಇದನ್ನು ನಾಸಿಕ್​​ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್​ನಲ್ಲಿ ನಿರ್ಮಿಸಲಾಗಿದೆ ಎಂದು ಭಟ್ಟಾಚಾರ್ಯ ಟ್ವೀಟ್​ ಮಾಡಿದ್ದಾರೆ.

— Sanjay Bhattacharyya (@AmbSanjay_) January 5, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...