alex Certify ಅಧಿಕಾರದಲ್ಲಿದ್ದಾಗ ಏನೂ ಮಾಡದ ಕಾಂಗ್ರೆಸ್ ಈಗ ‘ರಾಜಕೀಯ’ಕ್ಕಾಗಿ ಪಾದಯಾತ್ರೆ: ಗೋವಿಂದ ಕಾರಜೋಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರದಲ್ಲಿದ್ದಾಗ ಏನೂ ಮಾಡದ ಕಾಂಗ್ರೆಸ್ ಈಗ ‘ರಾಜಕೀಯ’ಕ್ಕಾಗಿ ಪಾದಯಾತ್ರೆ: ಗೋವಿಂದ ಕಾರಜೋಳ

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಕೈಗೊಂಡ ಪಾದಯಾತ್ರೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರವಿದ್ದಾಗ ನಿರ್ಲಕ್ಷಿಸಿ ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಆಗಿದೆ ಎಂದು ಟೀಕಿಸಿದ್ದಾರೆ. DPR ಸಿದ್ಧಪಡಿಸುವ ಟೆಂಡರ್ ಕರೆಯಲು ಕಾಂಗ್ರೆಸ್ ಗೆ 5 ವರ್ಷ ಬೇಕಾಗಿತ್ತೆ. ಇದಕ್ಕಾಗಿ ಕುಮಾರಸ್ವಾಮಿ ಬರಬೇಕಾಯ್ತು. ನಮ್ಮ ಸರ್ಕಾರ ಬಂದ ನಂತರ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಅಧಿಕಾರ ಇದ್ದಾಗ ನಿರ್ಲಕ್ಷಿಸಿ ಈಗ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯ ಗಿಮಿಕ್ ಆಗಿದೆ. 2013ರ ನವೆಂಬರ್ 5ರಂದು ಕಾವೇರಿ ನೀರಾವರಿ ನಿಗಮ ಸರ್ಕಾರಕ್ಕೆ ಪತ್ರ ಬರೆದು 4 ಜಿ ರಿಯಾಯಿತಿ ಕೊಡಬೇಕೆಂದು ಕೋರಿತ್ತು. 2014 ಏಪ್ರಿಲ್ 4 ರಂದು ಸರ್ಕಾರದಿಂದ ಪ್ರಸ್ತಾವನೆ ತಿರಸ್ಕರಿಸಲಾಗಿತ್ತು. 2019 ರಲ್ಲಿ ಮತ್ತೆ ರಿಯಾಯಿತಿ ಕೋರಲಾಗಿತ್ತು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. 2013 ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಏನು ಮಾಡಿರಲಿಲ್ಲ ಎಂದು ಟೀಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...