ಡಿಸೆಂಬರ್ನಲ್ಲಿ ಭಾರತದ ಕುಟಂಬಗಳಲ್ಲಿ ಮಾಧ್ಯಮ ಬಳಕೆ 25% ಏರಿಕೆಯಾಗಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದು ಬಂದಿದೆ. ವರದಿಯ ಪ್ರಕಾರ, ಇದು ಕಳೆದ ಮೂರು ತಿಂಗಳಲ್ಲೇ ಅತ್ಯಧಿಕವಾಗಿದೆ.
58% ಭಾರತೀಯರು ಸುದ್ದಿ ತಿಳಿಯಲು, ಡಿಜಿಟಲ್ ಅಪ್ಲಿಕೇಶನ್ಗಳು, ವೆಬ್ಸೈಟ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿದಿದೆ. ಇನ್ನುಳಿದಭಾರತೀಯರು ಸುದ್ದಿ ತಿಳಿಯಲು, ದೂರದರ್ಶನ ನೋಡುತ್ತಾರೆ ಎಂದು ವರದಿ ಹೇಳಿದೆ
ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್ಗಳಲ್ಲಿ, ಫೇಸ್ಬುಕ್ ಮತ್ತು ಯೂಟ್ಯೂಬ್ನ ನಂತರ ಹೆಚ್ಚು ಬಳಸಿದ ಅಪ್ಲಿಕೇಶನ್ ಆಗಿ ವಾಟ್ಸಾಪ್ ಹೊರಹೊಮ್ಮಿದೆ. ವೆಬ್ ಗಳಲ್ಲಿ ಸುದ್ದಿ ಹುಡುಕುವುದಕ್ಕೆ ಜನರು ಆದ್ಯತೆ ನೀಡುತ್ತಿರುವ ಕಳೆದ ಎರಡು ವರ್ಷಗಳಿಂದ ಆಗಿರುವ ಬದಲಾವಣೆ. ಜೊತೆಗೆ, ವಾಟ್ಸಾಪ್, ಫೇಸ್ಬುಕ್ ಮತ್ತು ಯೂಟ್ಯೂಬ್ ಬಳಕೆಯು ಹೆಚ್ಚಾಗಿರುವುದು, ಮನುಷ್ಯನ ಸುಪ್ತಾವಸ್ತೆಯ ವಿಧಾನವನ್ನ ಪ್ರತಿಬಿಂಬಿಸುತ್ತದೆ ಎಂದು ಆಕ್ಸಿಸ್ ಮೈ ಇಂಡಿಯಾದ ನಿರ್ದೇಶಕ ಪ್ರದೀಪ್ ಗುಪ್ತಾ ಹೇಳಿದ್ದಾರೆ.
ವರದಿಗಾಗಿ, 36 ರಾಜ್ಯಗಳಿಂದ 10563 ಜನರನ್ನು ಕಂಪ್ಯೂಟರ್ ನೆರವಿನಿಂದ, ದೂರವಾಣಿ ಸಂದರ್ಶನಗಳ ಮೂಲಕ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ 71% ಗ್ರಾಮೀಣ ಪ್ರದೇಶದವರಾಗಿದ್ದು ಮತ್ತು 29% ನಗರ ಭಾಗಕ್ಕೆ ಸೇರಿದವರು. ಪ್ರತಿಕ್ರಿಯಿಸಿದವರಲ್ಲಿ 64% ಪುರುಷರು ಮತ್ತು 36% ರಷ್ಟು ಮಹಿಳೆಯರಿದ್ದರು.