ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ನಾಳೆ ಅಂದ್ರೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಿರುತ್ತದೆ.
ಈ ವೇಳೆ ಯಾವ ಸೇವೆ ಲಭ್ಯವಿರುತ್ತದೆ ಇಲ್ಲ ಅನ್ನೋ ಕುತೂಹಲ ಎಲ್ಲರಲ್ಲಿರುವುದು ಸಾಮಾನ್ಯ. ಅದ್ರಲ್ಲು ಮದ್ಯ ಪ್ರಿಯರಂತು ಎಣ್ಣೆ ಸಿಗುತ್ತಾ ಇಲ್ವಾ ಅನ್ನೋ ಲೆಕ್ಕಾಚಾರದಲ್ಲಿ ಕಾದು ಕುಳಿತಿದ್ರು. ಆದ್ರೆ ಇವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು ವೀಕೆಂಡ್ ಕರ್ಪ್ಯೂನಲ್ಲಿ ಎಣ್ಣೆ ವ್ಯಾಪಾರಕ್ಕೆ ಬ್ರೇಕ್ ಹಾಕಿದೆ.
ಹೌದು, ವೀಕೆಂಡ್ ಕರ್ಫ್ಯೂ ಜಾರಿ ಇರುವ ವೇಳೆ ಎಣ್ಣೆ ಅಂಗಡಿ ಬಂದ್ ಮಾಡುವಂತೆ ಅಬಕಾರಿ ಇಲಾಖೆ ಸೂಚನೆ ಹೊರಡಿಸಿದೆ. ಸರ್ಕಾರದಿಂದ ಆದೇಶ ಬಂದ ಮೇಲೆ, ಈ ನಿರ್ಧಾರ ಕೈಗೊಂಡಿರುವ ಅಬಕಾರಿ ಇಲಾಖೆ ಬಾರ್ ಗಳನ್ನ ಮುಚ್ಚಲು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಇಲಾಖೆ ಅಪರ ಮುಖ್ಯ ಆಯುಕ್ತ ರಾಜೇಂದ್ರ ಪ್ರಸಾದ್, ಸರ್ಕಾರ ಹೊರಡಿಸಿರುವ ಆದೇಶವನ್ನ ಪಾಲಿಸುತ್ತಿದ್ದೇವೆ ಎಂದಿದ್ದಾರೆ. ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದ ಬಾರ್ ಗಳು ಬಂದ್ ಆಗಲಿದ್ದು, ಶನಿವಾರ ಭಾನುವಾರ ಎರಡು ದಿನ ಮದ್ಯ ಸಿಗುವುದಿಲ್ಲ. ಇತ್ತ ಬಾರ್ ಮಾತ್ರವಲ್ಲ ಹೋಟೆಲ್, ರೆಸ್ಟೋರೆಂಟ್, ಪಬ್, ಕ್ಲಬ್ ಹಾಗೂ ರೆಸಾರ್ಟ್ ಗಳನ್ನು ಶನಿವಾರ ಹಾಗೂ ಭಾನುವಾರ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ.