ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಕಾರಣದಿಂದಾಗಿ ಜನವರಿ 7ರಿಂದ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆಯಾಗಿದೆ.
ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವೀಕೆಂಡ್ ಕರ್ಫ್ಯೂ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಬೆಟ್ಟದಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂಡೂಡಿಕೆಯಾಗಿದೆ ಎಂದು ತಿಳಿದುಬಂದಿದೆ.
ಚಿಂತನಾ ಶಿಬಿರ ಮುಂದೂಡಿಕೆ ಬೆನ್ನಲ್ಲೇ ಹೈಕಮಾಂಡ್ ಗೆ ಸಲ್ಲಿಕೆಯಾಗಬೇಕಿದ್ದ ಸಚಿವರ ಮೌಲ್ಯಮಾಪನ, ಸಂಪುಟ ಪುನರಚನೆ ಕುರಿತ ಪ್ರಕ್ರಿಯೆಗಳಿಗೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸಂಪುಟ ಸಚಿವರು ನಿರಾಳರಾಗಿದ್ದಾರೆ.