ಕೊರೊನಾ ಎರಡನೇ ಅಲೆಯಿಂದ ಕಳೆದ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ದೇಶಾದ್ಯಂತ ವಿಧಿಸಲಾದ ಹೊಸ ನಿರ್ಬಂಧಗಳು ಹಾಗೂ ಲಾಕ್‌ಡೌನ್‌ನಿಂದ ಲಕ್ಷಾಂತರ ಜನರು ಕೆಲಸಗಳನ್ನು ಕಳೆದುಕೊಂಡರು. ಕಂಪನಿಗಳ ಬಾಗಿಲು ಮುಚ್ಚಿದವು, ಜನರು ಆದಾಯವಿಲ್ಲದೆಯೇ ಆತ್ಮಹತ್ಯೆಗೆ ಕೂಡ ಶರಣಾದರು.
ಇಂಥ ದುರ್ಗಮ ಪರಿಸ್ಥಿತಿಯಲ್ಲಿ ಜನರು ತಮ್ಮ ಶಾಪಿಂಗ್ ಹಾಗೂ ಅಗತ್ಯ ವಸ್ತುಗಳ ತುರ್ತು ಖರೀದಿಗೆ ಮೊರೆಹೋಗಿದ್ದು ಇ-ಕಾಮರ್ಸ್ ಕ್ಷೇತ್ರದ ದೈತ್ಯ ಕಂಪನಿಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗೆ.
ಪರಿಣಾಮ 2020-21ನೇ ಹಣಕಾಸು ವರ್ಷದಲ್ಲಿ ಅಮೆಜಾನ್ ಆದಾಯ 49% ಹೆಚ್ಚಳ ಕಂಡಿದೆ. 10 ಸಾವಿರ ಕೋಟಿ ರೂ. ವಾರ್ಷಿಕ ಆದಾಯವಿದ್ದ ಕಂಪನಿಯು 16,379 ಕೋಟಿ ರೂ. ವಹಿವಾಟು ನಡೆಸಿ ಲಾಭ ಗಳಿಸಿದೆ. ಕಂಪನಿಯ ಆಡಿಟ್ ಪ್ರಕಾರ ಒಟ್ಟಾರೆ ಲಾಭವು 132% ಹೆಚ್ಚಿದೆ.
ಈ ದೇಶದ ಕಾರುಗಳ ಜಾಹೀರಾತಿನಲ್ಲಿ ನಿಸರ್ಗ ಸ್ನೇಹಿ ಸಂದೇಶ ಕಡ್ಡಾಯ…!
ಇದರ ಬೆನ್ನಿಗೇ ಅಮೆಜಾನ್ ಹೋಲ್‌ಸೇಲ್ ಇಂಡಿಯಾ ಕಂಪನಿಗೆ ಪ್ರಬಲ ಪೈಪೋಟಿ ಕೊಡುತ್ತಿರುವ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಕಂಪನಿಯು ಕೋವಿಡ್ ಎರಡನೇ ಅಲೆ ವೇಳೆ ಗಳಿಸಿದ ಆದಾಯ 25% ಹೆಚ್ಚಳ ಕಂಡಿದೆ. ಸಿಂಗಾಪುರ ಮೂಲದ ಕಂಪನಿಯ ನೋಂದಣಿ ಹೊಂದಿರುವ ಫ್ಲಿಪ್‌ಕಾರ್ಟ್, ಶಿಪ್ಪಿಂಗ್, ಪೇಮೆಂಟ್, ಮಾರಾಟದಂತಹ ಹಲವು ಕಾರ್ಯವ್ಯಾಪ್ತಿ ಹೊಂದಿದೆ. ಇವೆಲ್ಲವುಗಳಿಂದ 42,491 ಕೋಟಿ ರೂ. ಗಳಿಸಿದೆ.
ವಾರ್ಷಿಕವಾಗಿ ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ವಿಭಾಗವು 4,949 ಕೋಟಿ ರೂ. ಲಾಭ ಗಳಿಸುತ್ತಿತ್ತು. ಆದರೆ, ಈ 2020-21ನೇ ಸಾಲಿನಲ್ಲಿ 7,555 ಕೋಟಿ ರೂ. ಲಾಭ ಸಿಕ್ಕಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.