ಹೊಸ ವರ್ಷ ಬಂದಾಗಿದೆ. ಅಲ್ಲಿಗೆ ನಿಮ್ಮ ನೆಚ್ಚಿನ ತ್ವರಿತ ಮೆಸೇಜಿಂಗ್ ಆ್ಯಪ್ ’’ವಾಟ್ಸಾಪ್’’ ಕೂಡ ಹೊಸದಾಗಿ ಕಾಣಿಸಬೇಕಲ್ಲವೇ. ಅದಕ್ಕಾಗಿಯೇ ಕಂಪನಿಯು ಹೊಸ ಫೀಚರ್ ಪರಿಚಯಿಸಲಿದೆ.
ನೋಟಿಫಿಕೇಶನ್ಗಳು ಅಥವಾ ಸಂದೇಶ ಬಂದಿರುವ ಎಚ್ಚರಿಕೆಯ ನೋಟ್ಗಳಲ್ಲಿ ಸಂದೇಶ ಕಳುಹಿಸಿದವರ ’ಪ್ರೊಫೈಲ್ ಫೋಟೊ’ ಪ್ರದರ್ಶಿತವಾಗಲಿದೆ.
ಈ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಪರಿಚಯಿಸಲಿದೆ.
ಆದರೆ ನೀವು ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಅಪ್ಡೇಟ್ ಮಾಡಬೇಕು. 2.22.1.1 ಬೀಟಾ ಆವೃತ್ತಿಗೆ ಮಾತ್ರವೇ ಈ ಹೊಸ ವೈಶಿಷ್ಟ್ಯತೆ ಅನ್ವಯವಾಗಲಿದೆ. ಚಾಟ್ ಗಳಲ್ಲಿ ಮತ್ತು ಗ್ರೂಪ್ ಚಾಟ್ ಗಳಲ್ಲಿ ಕೂಡ ಪ್ರೊಫೈಲ್ ಫೋಟೊ ಪ್ರದರ್ಶಿತ ನೋಟಿಫಿಕೇಶನ್ ರವಾನೆ ಆಗಲಿದೆ.
ಇನ್ನೂ ಪ್ಯಾನ್-ಆಧಾರ್ ಲಿಂಕ್ ಮಾಡಿಲ್ವ..? ಗಡುವಿನೊಳಗೆ ಜೋಡಣೆ ಮಾಡದಿದ್ರೆ ಕಾರ್ಡ್ ಅಮಾನ್ಯ, ಎದುರಾಗಲಿದೆ ಅನೇಕ ಸಮಸ್ಯೆ
ಹೊಸ ವರ್ಷದಲ್ಲಿ ನಿಮಗೆ ಸಂದೇಶ ಕಳುಹಿಸಿರುವವರ ಬಗ್ಗೆ ವಾಟ್ಸಾಪ್ ಓಪನ್ ಮಾಡಿಯೇ ನೋಡಬೇಕೆಂದಿಲ್ಲ. ಸಣ್ಣಗೆ ಎಚ್ಚರಿಕೆ ಗಂಟೆಯೊಂದಿಗೆ ಬರುವ ನೋಟಿಫಿಕೇಶನ್ನಲ್ಲಿಯೇ ಸಂದೇಶ ಕಳುಹಿಸಿದವರ ಸಣ್ಣ ಫೋಟೊ ಕಾಣಲಿದೆ. ಈ ಮೂಲಕ ಸಂದೇಶಕ್ಕೆ ಮಹತ್ವದ ನೀಡುವ ಬಗ್ಗೆ ಕೂಡಲೇ ನೀವು ನಿರ್ಧರಿಸಲು ಇದು ಅನುಕೂಲವಾಗಲಿದೆ.
ಫೇಸ್ಬುಕ್ ಕಂಪನಿಯ ಒಡೆತನದಲ್ಲಿರುವ ವಾಟ್ಸಾಪ್, ಸದ್ಯ ಮೆಟಾ ಒಡೆತನದ ವಾಟ್ಸಾಪ್ ಆಗಿದೆ. ಅಂದರೆ ಫೇಸ್ಬುಕ್ ಕಂಪನಿಯು ತನ್ನ ಮೂಲ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿದೆ. ಖ್ಯಾತ ಸಾಮಾಜಿಕ ಜಾಲತಾಣ ಫೇಸ್ಬುಕ್ಗೆ ಮಾತ್ರವೇ ಆ ಹೆಸರು ಸೀಮಿತವಾಗಿದೆ.