alex Certify EXCLUSIVE: ಪ್ರಧಾನಿ ಸಂಚರಿಸುವ ಮಾರ್ಗದ ಮಾಹಿತಿ ಪೊಲೀಸರಿಂದಲೇ ಸೋರಿಕೆ, ಖಚಿತಪಡಿಸಿದ ಭಾರತೀಯ ಕಿಸಾನ್​ ಯೂನಿಯನ್ ಮುಖಂಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

EXCLUSIVE: ಪ್ರಧಾನಿ ಸಂಚರಿಸುವ ಮಾರ್ಗದ ಮಾಹಿತಿ ಪೊಲೀಸರಿಂದಲೇ ಸೋರಿಕೆ, ಖಚಿತಪಡಿಸಿದ ಭಾರತೀಯ ಕಿಸಾನ್​ ಯೂನಿಯನ್ ಮುಖಂಡರು

ದೇಶದಲ್ಲಿ ನಡೆದ ಅತೀ ದೊಡ್ಡ ಭದ್ರತಾ ಲೋಪದ ಹಿನ್ನೆಲೆಯಲ್ಲಿ ನಿನ್ನೆ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಫಿರೋಜ್​ಪುರದಲ್ಲಿ ಪ್ರತಿಭಟನಾ ನಿರತ ರೈತರ ದಿಗ್ಬಂಧನದಿಂದಾಗಿ ಫ್ಲೈಓವರ್​ನಲ್ಲಿ ಸಿಲುಕಿಕೊಂಡಿತ್ತು.

ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಮೊದಲೇ ನಿಗದಿಯಾಗಿದ್ದ ರ್ಯಾಲಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಪ್ರಧಾನಿ ಮೋದಿ ಪಂಜಾಬ್​ನಿಂದ ಹಿಂದಿರುಗಿದ್ದರು.

ಹೆಲಿಕಾಪ್ಟರ್​ನಲ್ಲಿ ತೆರಳಬೇಕಿದ್ದ ಪ್ರಧಾನಿ ಮೋದಿ ಹವಾಮಾನ ಸೂಕ್ತವಾಗಿಲ್ಲದ ಕಾರಣ ರಸ್ತೆ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು. ಪಂಜಾಬ್​ ಪೊಲೀಸರು ರಸ್ತೆ ಮಾರ್ಗದ ಭದ್ರತೆಯನ್ನು ಖಚಿತಪಡಿಸಿದ ಬಳಿಕವೇ ಪ್ರಧಾನಿ ಮೋದಿ ಬೆಂಗಾವಲು ವಾಹನ ರಸ್ತೆ ಮಾರ್ಗದಲ್ಲಿ ಹೊರಟಿತ್ತು.

ಮೋದಿ ಯಾವ ಮಾರ್ಗದಲ್ಲಿ ಸಂಚರಿಸುತ್ತಾರೆ ಎನ್ನುವುದು ಪಂಜಾಬ್​ ಪೊಲೀಸರಿಗೆ ಮಾತ್ರ ತಿಳಿದಿತ್ತು. ಹೀಗಾಗಿ ಭದ್ರತಾ ಲೋಪದ ಬಗ್ಗೆ ಪಂಜಾಬ್​ ಪೊಲೀಸರ ಬಗ್ಗೆ ಅನುಮಾನ ಮೂಡುವಂತೆ ಆಗಿತ್ತು.

ಈ ಶಂಕೆಯ ನಡುವೆಯೇ ಭಾರತೀಯ ಕಿಸಾನ್​ ಯೂನಿಯನ್​ ಭದ್ರತಾ ಲೋಪದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದೆ. ಬಿಕೆಯು ಸುರ್ಜೀತ್​ ಸಿಂಗ್​ ಫೂಲ್​​ ಪಂಜಾಬ್​ ಪೊಲೀಸರೇ ಪ್ರಧಾನಿಯವರ ರಸ್ತೆ ಮಾರ್ಗದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ್ದಾರೆ.

ದೆಹಲಿಯ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆ ಹಾಗೂ ಲಖೀಂಪುರ ಹಿಂಸಾಚಾರ ಪ್ರಕರಣಗಳಲ್ಲಿ ನಷ್ಟ ಅನುಭವಿಸಿದ ರೈತರಿಗೆ ಕೇಂದ್ರದಿಂದ ಈವರೆಗೆ ಯಾವುದೇ ಪರಿಹಾರ ದೊರಕಿರಲಿಲ್ಲ . ಹೀಗಾಗಿ ನಾವು ಪ್ರತಿಭಟನೆ ಮಾಡಲು ನಿರ್ಧರಿಸಿದೆವು. ಬಟಿಂಡಾಗೆ ಅವರು ರಸ್ತೆ ಮಾರ್ಗದಲ್ಲಿ ಬರಲಿದ್ದಾರೆ ಎಂಬ ಮಾಹಿತಿ ನಮಗೆ ತಿಳಿಯಿತು. ಅಲ್ಲಿ ಹೆಲಿಪ್ಯಾಡ್​ ಕೂಡ ನಿರ್ಮಾಣವಾಗಿತ್ತು. ಆದರೆ ಪೊಲೀಸರು ನಮಗೆ ಅವರು ರಸ್ತೆ ಮಾರ್ಗದಲ್ಲಿ ಬರುತ್ತಾರೆ ಎಂದು ಮಾಹಿತಿ ನೀಡಿದರು. ಮೊದಲು ನಮಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದೆನಿಸಿತು. ಪೊಲೀಸರು ನೀಡಿದ ಮಾಹಿತಿಯನ್ನೇ ಆಧರಿಸಿ ನಾವು ಫ್ಲೈಓವರ್​ನಲ್ಲಿ ಮೋದಿಯ ಬೆಂಗಾವಲು ವಾಹನವನ್ನು ತಡೆಯಲು ಯೋಜನೆ ರೂಪಿಸಿದೆವು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...