ಕುಟುಂಬದ ಸದಸ್ಯರಿಂದ ದೂರವಾಗುವುದು ಸುಲಭವಾದ ವಿಚಾರವಲ್ಲ. ಒಂದಲ್ಲ ಒಂದು ದಿನ ನಮ್ಮ ಪ್ರೀತಿಪಾತ್ರರು ನಮ್ಮನ್ನು ಬಿಟ್ಟು ಹೋಗಲೇ ಬೇಕು. ಆಗ ನಾವು ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನೆಯುವುದು ಸಹಜ.
ಇಂಥದ್ದೇ ನಿದರ್ಶನವೊಂದರಲ್ಲಿ, ಮಹಿಳೆಯೊಬ್ಬರು ತನ್ನ ದಿವಂಗತ ತಂದೆಯ ಆಲ್ಬಂ ಒಂದರಲ್ಲಿದ್ದ ಹಳೆಯ ಫಿಲ್ಮ್ ಛಾಯಾಗ್ರಹಣ ಕಂಡು ಬೆರಗಾಗಿದ್ದಾರೆ. ಬೆಟ್ಟಗಳು, ಕೆರೆಗಳು ಇರುವ ನಾಲ್ಕು ಚಿತ್ರಗಳನ್ನು ಕಂಡು ಪುಳಕಿತರಾದ ಡೆರೆಯಾ ಹೆಸರಿನ ಟ್ವಿಟ್ಟಿಗೆಯೊಬ್ಬರು ತನ್ನ ತಂದೆಯ ಛಾಯಾಗ್ರಹಣವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
BIG BREAKING: ಒಂದೇ ದಿನದಲ್ಲಿ 90,900ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು; 24 ಗಂಟೆಯಲ್ಲಿ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ
ಈ ಚಿತ್ರಗಳಿಗೆ 6,000+ ರೀಟ್ವೀಟ್‌ಗಳು ಸಿಕ್ಕಿದ್ದು, ಈ ಚಿತ್ರಗಳಿಗೆ ಮೊದಲು ವಾಟರ್ ಮಾರ್ಕ್ ಹಾಕುವ ಮೂಲಕ ಕಾಪಿರೈಟ್ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನೆಟ್ಟಿಗರೊಬ್ಬರು ಡೆರೆಯಾಗೆ ಸಲಹೆ ನೀಡಿದ್ದಾರೆ.
https://twitter.com/Deryakba/status/1477751415351173123?ref_src=twsrc%5Etfw%7Ctwcamp%5Etweetembed%7Ctwterm%5E1477761327796035591%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fwoman-stunned-by-breathtaking-photos-she-discovers-in-her-dead-fathers-album-4625129.html