ದೇಶದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ.) ತನ್ಮೂಲಕ ಮಾಡಲಾಗುವ ತ್ವರಿತ ಪಾವತಿ ಸೇವೆಗಳ (ಐಎಂಪಿಎಸ್) ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಘೋಷಿಸಿದೆ.
ಎಸ್.ಬಿ.ಐ.ನ ಡಿಜಿಟಲ್ ಬ್ಯಾಂಕಿಂಗ್ ವಾಹಿನಿಗಳ ಮುಖಾಂತರ ಮಾಡಲಾಗುವ ಐದು ಲಕ್ಷ ರೂ.ಗಳ ಒಳಗಿನ ಐಎಂಪಿಎಸ್ ವಹಿವಾಟಿನ ಮೇಲೆ ಶುಲ್ಕ ಇರುವುದಿಲ್ಲ.
ಮುದ್ದಿನ ಕೋಳಿಗೆ ಅದ್ದೂರಿ ಬರ್ತಡೇ ಆಚರಣೆ…! ಕೇಕ್ ತಿನ್ನಿಸಿ ಸಂಭ್ರಮಿಸಿದ ಕುಟುಂಬ
ತನ್ನ ಅಂತರ್ಜಾಲ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಎಸ್‌ಬಿಐ ಅಪ್ಲಿಕೇಶನ್ ಮೂಲಕ ಮಾಡಲಾಗುವ ಐಎಂಪಿಎಸ್‌ಗಳ ಮೇಲೆ ಈ ನೀತಿ ಅನ್ವಯವಾಗುತ್ತದೆ ಎಂದು ಎಸ್.ಬಿ.ಐ. ಟ್ವೀಟ್ ಮೂಲಕ ತಿಳಿಸಿದೆ.