ನವದೆಹಲಿ: 10 ಮತ್ತು 12ನೇ ತರಗತಿ ಎರಡನೇ ಅವಧಿ ಬೋರ್ಡ್ ಪರೀಕ್ಷೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ ಎಂಬ ತಪ್ಪು ಮಾಹಿತಿ ಹರಡಲಾಗುತ್ತಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ಪರೀಕ್ಷೆಗಳ ಕುರಿತಾದ ಅಧಿಕೃತ ಮತ್ತು ಇತ್ತೀಚಿನ ಮಾಹಿತಿಗಳನ್ನು ಸಿಬಿಎಸ್ಇ ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ. ಕೆಲವು ಆನ್ಲೈನ್ ವೇದಿಕೆಗಳಲ್ಲಿ 10 ಮತ್ತು 12ನೇ ತರಗತಿ ಎರಡನೇ ಅವಧಿ ಬೋರ್ಡ್ ಪರೀಕ್ಷೆಗಳ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ ಎಂಬ ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಳೆದ ವರ್ಷ ಜುಲೈನಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲ ಅವಧಿ ಪರೀಕ್ಷೆಗಳು ಮುಗಿದಿದ್ದು, ಅದೇ ರೀತಿಯಲ್ಲೇ ಎರಡನೇ ಅವಧಿ ಪರೀಕ್ಷೆಗಳೂ ನಡೆಯಲಿವೆ. ಎಂದು ಸಿಬಿಎಸ್ಇ ತಿಳಿಸಿದೆ.