ರಾಜಹಂಸಗಳ ಮೊಟ್ಟೆಯಿಡುವ ಪ್ರದೇಶದ ಅದ್ಭುತ ಚಿತ್ರಣ ಡ್ರೋನ್ ಕ್ಯಾಮರಾದಲ್ಲಿ ಸೆರೆ..! 06-01-2022 8:11AM IST / No Comments / Posted In: Latest News, India, Live News ರಾನ್ ಆಫ್ ಕಚ್ನಲ್ಲಿ ರಾಜಹಂಸ/ಬಣ್ಣದ ಕೊಕ್ಕರೆಗಳ ಬೃಹತ್ ಗೂಡುಕಟ್ಟುವ ಪ್ರದೇಶವನ್ನು ಡ್ರೋನ್ ಕ್ಯಾಮರಾದಿಂದ ಚಿತ್ರೀಕರಿಸಲಾಗಿದೆ. ಈ ವಿಡಿಯೋ ಇದೀಗ ನೆಟ್ಟಿಗರನ್ನು ಬೆರಗುಗೊಳಿಸಿದೆ. ವಿಶಾಲವಾದ ಗೂಡುಕಟ್ಟುವ ಪ್ರದೇಶದಲ್ಲಿ ಸಣ್ಣ ದಿಬ್ಬಗಳ ಮೇಲೆ ಸಾವಿರಾರು ಮೊಟ್ಟೆಗಳು ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಅದ್ಭುತ ದೃಶ್ಯದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ರಾನ್ ಆಫ್ ಕಚ್ನಿಂದ ಅತ್ಯಂತ ಸುಂದರವಾದ ಚಿತ್ರಗಳು ಹೊರಹೊಮ್ಮಿವೆ. ಚಳಿಗಾಲದಲ್ಲಿ ಸಾವಿರಾರು ಹಕ್ಕಿಗಳು ಈ ಪ್ರದೇಶಕ್ಕೆ ವಲಸೆ ಬರುತ್ತವೆ. ರಾಜಹಂಸಗಳು ಮೊಟ್ಟೆಗಳನ್ನು ಇಟ್ಟಿರುವ ದೃಶ್ಯದ ವಿಡಿಯೋ ನೋಡಲು ಆಸಕ್ತಿದಾಯಕವಾಗಿವೆ. ಇಡೀ ಪ್ರದೇಶವನ್ನು ಗುಡ್ಕರ್ ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲಾಗುತ್ತದೆ ಈ ವಿಡಿಯೋವನ್ನು ಪತ್ರಕರ್ತ ಜನಕ್ ದವೆ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ರಾಜ್ಕೋಟ್ನ ಐಎಎಸ್ ಅಧಿಕಾರಿ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ದೇವ್ ಚೌಧರಿ ಅವರು ಮರುಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಇಂತಹ ಅದ್ಭುತ ದೃಶ್ಯವನ್ನು ಸೆರೆಹಿಡಿಯುವುದು ಬಹಳ ಅಪರೂಪ ಎಂದು ಹಲವರು ಹೇಳಿದರೆ, ಇತರರು ಡ್ರೋನ್ ಚಲನೆ ರಾಜಹಂಸಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜಹಂಸಗಳು ಭಾರತೀಯ ಮೂಲದ ಪಕ್ಷಿಯಲ್ಲ. ಇವುಗಳು ಹೆಚ್ಚಾಗಿ ಅಮೆರಿಕದಾದ್ಯಂತ ಕಾಣಸಿಗುತ್ತವೆ. ಆದರೆ, ಇತ್ತೀಚೆಗೆ ತಮಿಳುನಾಡಿನ ಕೊಡಿಯಾಕರೈನಲ್ಲಿರುವ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ವಲಸೆ ರಾಜಹಂಸಗಳ ವಿಜೃಂಭಣೆ ಕಂಡುಬಂದಿತ್ತು. ರಾಜಹಂಸಗಳು ನೋಡಲು ಗಾತ್ರದಲ್ಲಿ ಸಾಕಷ್ಟು ದೊಡ್ಡದಾಗಿರುತ್ತವೆ. ಆದರೆ, ಹಾರುವ ಸಾಮರ್ಥ್ಯವನ್ನು ಸಹ ಹೊಂದಿವೆ. ಅವು ಸಾಮಾನ್ಯವಾಗಿ ಸೀಗಡಿ, ನೀಲಿ-ಹಸಿರು ಪಾಚಿ, ಕೀಟಗಳ ಲಾರ್ವಾ, ಸಣ್ಣ ಕೀಟಗಳು ಮುಂತಾದವುಗಳನ್ನು ತಿನ್ನುತ್ತವೆ. कच्छ के छोटे रण से खुबसूरत तस्वीरें आई है। ठण्ड के इस मौसम में विदेशो से हजारो पक्षी इस इलाके में आते है। सुर्खाब,फ्लेमिंगो ने अंडे दिए है उसकी तस्वीरे दिलचस्प है। दरअसल पूरा इलाका घुडखर अभ्यारण के तौर पर जाना जाता है।@ParveenKaswan @GujForestDept @ronakdgajjar @Kaushikdd pic.twitter.com/FV3SiQO95w — Janak Dave (@dave_janak) January 3, 2022