ಭಾರತೀಯ ಮಹಿಳೆಯೊಬ್ಬರು 12,000 ಕೆ.ಜಿ ತೂಕದ ಬಸ್ ಅನ್ನು ತನ್ನ ಕೂದಲಿಂದ ಎಳೆಯುವ ಮೂಲಕ 2016ರಲ್ಲಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಈ ವಿಡಿಯೋವನ್ನು ಇತ್ತೀಚೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಆಶಾ ರಾಣಿ ಎಂಬುವವರೇ 2016ರಲ್ಲಿ 12,216 ಕೆ.ಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತನ್ನ ಕೂದಲನ್ನು ಬಳಸಿ ಎಳೆಯುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಈ ವಿಡಿಯೋವನ್ನು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. 2016ರಲ್ಲಿ ಈ ಸಾಧನೆ ಮಾಡಿದ ಆಶಾ ರಾಣಿ ರನ್ನು ಐರನ್ ಕ್ವೀನ್ ಎಂದು ಕರೆಯಲಾಗಿದೆ.
ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್ ಗೆ ಕಟ್ಟಿರೋ ಹಗ್ಗವನ್ನು ಆಶಾ ಅವರ ಕೂದಲುಗಳಿಗೆ ಬಿಗಿಯಾಗಿ ಕಟ್ಟಲಾಗಿತ್ತು. ಆಕೆ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಆಕೆ ವಿಶ್ವದಾಖಲೆಯನ್ನು ಮಾಡಿದ್ದು ಆನಂದಭಾಷ್ಪ ಸುರಿಸಿದ್ದಾರೆ.
ಆಶಾ ರಾಣಿ ಅನೇಕ ದಾಖಲೆಗಳನ್ನು ಹೊಂದಿದ್ದಾರೆ ಎಂದು ಗಿನ್ನಿಸ್ ವಿಶ್ವ ದಾಖಲೆಗಳು ತಿಳಿಸಿವೆ. ಇದರಲ್ಲಿ ಕಿವಿಗಳಿಂದ ಎಳೆದ ಭಾರವಾದ ವಾಹನ, ಕೂದಲಿನೊಂದಿಗೆ ಎತ್ತುವ ದೊಡ್ಡ ತೂಕ ಮತ್ತು ಅದಕ್ಕೂ ಎರಡು ವರ್ಷಗಳ ಹಿಂದೆ, ಯುಕೆಯ ಲೀಸೆಸ್ಟರ್‌ಶೈರ್‌ನಲ್ಲಿ 1,700 ಕೆ.ಜಿ ತೂಕದ ವ್ಯಾನ್ ಎಳೆಯಲು ಆಕೆ ತನ್ನ ಎರಡೂ ಕಿವಿಗಳನ್ನು ಬಳಸಿದ್ದರು.