ಕಳೆದ ವಾರದಿಂದ ಕೇರಳದಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಮೂಲಕ ದೇಶದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಕೊರೋನಾ ಸಂಬಂಧಿತ ಸಾವುಗಳನ್ನ ದಾಖಲಿಸಿರುವ ರಾಜ್ಯವಾಗಿ ಕೇರಳ ಗುರುತಿಸಿಕೊಂಡಿದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಕೇರಳದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿರೋದ್ಯಾಕೆ ಅನ್ನೋ ಪ್ರಶ್ನೆಯು ಕಾಡೋಕೆ ಶುರುವಾಗಿದೆ.
ತಜ್ಞರು ಮತ್ತು ಸರ್ಕಾರದ ಪ್ರಕಾರ ರಾಜ್ಯದಲ್ಲಿ ಇನ್ನೂ ನಡೆಯುತ್ತಿರುವ ಸಮನ್ವಯ ಪ್ರಕ್ರಿಯೆಯೇ ಇದರ ಹಿಂದಿನ ಕಾರಣ. ಈ ಹಿಂದೆ ವಿವಿಧ ಕಾರಣಗಳಿಂದ ಕೈಬಿಡಲಾಗಿದ್ದ ಸಾವುಗಳನ್ನು ಈಗ ಕೋವಿಡ್ ಸಾವಿನ ಸಂಖ್ಯೆಗೆ ಸೇರಿಸಲಾಗುತ್ತಿದೆ ಎಂದು ಹೇಳಲಾಗ್ತಿದೆ.
ಚುನಾವಣೆ ಸಂದರ್ಭದಲ್ಲಿ ಕೇವಲ 40% ಸಾವುಗಳನ್ನ ಮಾತ್ರ ಅಧಿಕೃತವಾಗಿ ಘೋಷಿಸಲಾಗುತ್ತಿತ್ತು, ಆಗ ಕೈಬಿಡಲಾದ ಪ್ರಕರಣಗಳನ್ನ ಈಗ ಸೇರಿಸುತ್ತಿದ್ದು, ಕೇರಳದ ಪರಿಸ್ಥಿತಿ ಆ ಸಂದರ್ಭದಲ್ಲಿ ಹೇಗಿತ್ತು ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಎರಡನೇ ಅಲೆಯ ಸಮಯದಲ್ಲಿ ಸಾವಿನ ವರದಿಗಳು ಹೆಚ್ಚಾದವು. 2021, ಜೂನ್ 16ರ ನಂತರ, ಸುಮಾರು 10,000 ಸಾವುಗಳೊಂದಿಗೆ ರಾಜ್ಯದಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆ ವರದಿಯಾಗಿತ್ತು. ಈಗ ಮೂರನೇ ಅಲೆಯ ಆರಂಭದಲ್ಲಿ ಪ್ರಕರಣಗಳು ರಾಜಿಯಾಗುತ್ತಿದ್ದು, ಸರಕಾರ ಗುರುತಿಸಿರುವ ಪ್ರಕರಣಗಳು ಹಾಗೂ ಮೇಲ್ಮನವಿ ಮೂಲಕ ಬರುವ ಪ್ರಕರಣಗಳೂ ಇದರಲ್ಲಿ ಸೇರಿವೆ.
ನ್ಯಾಯಾಲಯದ ಆದೇಶ ಬರುವ ಮುನ್ನವೇ ನಾನಾ ಕಾರಣಗಳಿಂದ ಕೈಬಿಟ್ಟಿದ್ದ ಸುಮಾರು 7,000 ಸಾವುಗಳನ್ನು ಸೇರಿಸುವುದಾಗಿ ಸರಕಾರ ಘೋಷಿಸಿತ್ತು. ಈಗಲೂ ಸರಿಯಾದ ಡೆತ್ ರೇಟ್ಸ್ ತೋರಿಸುತ್ತಿದ್ದಾರ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ರಾಜಿ ಮಾಡಿಕೊಳ್ಳುತ್ತಿರುವ ಸಾವಿನ ವಿವರಗಳು ಸಾರ್ವಜನಿಕ ವೇದಿಕೆಯಲ್ಲಿ ಲಭ್ಯವಿಲ್ಲ ಎಂದು ಡಾ ಅರುಣ್ ಹೇಳಿದ್ದಾರೆ.
ಸೋಮವಾರ, ಕೇರಳದಲ್ಲಿ 71 ಕೋವಿಡ್ ಸಾವುಗಳು ವರದಿಯಾಗಿವೆ, ಇದು ದೇಶದಲ್ಲೇ ಅತಿ ಹೆಚ್ಚು. ಭಾನುವಾರ, 78 ಸಾವುಗಳು ವರದಿಯಾಗಿದ್ದರೆ, ಡಿಸೆಂಬರ್ 27 ರಂದು 236, ಡಿಸೆಂಬರ್ 28 ರಂದು 244, ಡಿಸೆಂಬರ್ 29 ರಂದು 211 ಸಾವುಗಳು, ಡಿಸೆಂಬರ್ 30 ರಂದು 164 ಸಾವುಗಳು ಮತ್ತು ಡಿಸೆಂಬರ್ 31 ರಂದು 353 ಸಾವುಗಳು ವರದಿಯಾಗಿವೆ.
ಕೇರಳದ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಪದ್ಮನಾಭ ಶೆಣೈ, ಸಾವಿನ ವರದಿಗಳ ಹೆಚ್ಚಳವು ಸಮನ್ವಯ ಪ್ರಕ್ರಿಯೆಯ ಭಾಗವಾಗಿದೆ, ರಾಜ್ಯದಲ್ಲಿ ಈಗ ಸಾವಿನ ಸಂಖ್ಯೆ ಹೆಚ್ಚಿಲ್ಲ, ಇದು ನಿಸ್ಶಂಶಯವಾಗಿ ಸಮನ್ವಯದ ಭಾಗವಾಗಿದೆ. ಕೇರಳ ಕೊರೋನಾ ಸಾವುಗಳ ನಿಯಂತ್ರಣಕ್ಕೆ ಅತ್ಯುತ್ತಮ ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ.