ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗದಂತಾಗಿದೆ. ಇತ್ತೀಚೆಗೆ ಲಯಕ್ಕೆ ಮರಳುತ್ತಿರುವ ಆರ್ಥಿಕತೆ, ಸಾಮಾನ್ಯ ಜನಜೀವನಕ್ಕೆ ಒಮಿಕ್ರಾನ್ ತರ್ಪಣ ಬಿಟ್ಟಿದೆ. ಈಗಾಗ್ಲೇ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸಲು ಹಲವು ನಿಯಮಗಳನ್ನ ಹೇರಿದ್ದರು, ದಿನೇದಿನೇ ಏರಿಕೆಯಾಗ್ತಿರೊ ಸಂಖ್ಯೆ ಮತ್ತೊಂದು ಕಥೆಯನ್ನೆ ಹೇಳುತ್ತಿವೆ.
ಹೌದು, ಬೆಂಗಳೂರಿನಲ್ಲಿ ಬರೋಬ್ಬರಿ 201 ದಿನದ ಬಳಿಕ ಒಂದೇ ದಿನ 2 ಸಾವಿರಕ್ಕು ಹೆಚ್ಚು ಸೋಂಕು ವರದಿಯಾಗಿದೆ. ಮಂಗಳವಾರ 2053 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ, ಜೂನ್ 12 ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿತ್ತು, ಈಗ ಮತ್ತೆ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ2 ಸಾವಿರದ ಗಡಿ ದಾಟಿದೆ. ಈ ಮೂಲಕ ನಗರದ ಕ್ಲಸ್ಟರ್, ಕಂಟೇನ್ಮೆಂಟ್ ಜ಼ೋನ್, ಮೈಕ್ರೋ ಕಂಟೇನ್ಮೆಂಟ್ ಜ಼ೋನ್ ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ನಗರದ ಮೈಕ್ರೋ ಕಂಟೇನ್ಮೆಂಟ್ ಜ಼ೋನ್ ಸಂಖ್ಯೆ 154ಕ್ಕೆ ಏರಿಕೆಯಾಗಿದ್ದು ಈ ವಲಯದಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗ್ತಿದೆ. ಬೊಮ್ಮನಹಳ್ಳಿ 49, ಮಹದೇವಪುರ 48, ದಕ್ಷಿಣ 15, ಪಶ್ಚಿಮ 16, ಪೂರ್ವ 12, ಯಲಹಂಕ 10, ದಾಸರಹಳ್ಳಿ 3, ಆರ್‌ಆರ್ ನಗರ 1 ಸೇರಿದಂತೆ ನಗರದಲ್ಲಿ ಕೊರೋನಾ ಹೆಚ್ಚಳದ ಜೊತೆ ಅತಿಸೂಕ್ಷ್ಮ ವಲಯಗಳ ಸಂಖ್ಯೆಯು ಏರಿಕೆಯಾಗಿದೆ.
ಜೊತೆಗೆ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 8ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗ್ತಿದ್ದಾರೆ ಎಂದು ಪಾಲಿಕೆ ನೀಡಿರುವ ಅಂಕಿಅಂಶಗಳಲ್ಲಿ ಬಯಲಾಗಿದೆ. ಬೆಳ್ಳಂದೂರು ವಾರ್ಡ್‌ನಲ್ಲಿ 40 ಸೋಂಕಿತರು, ದೊಡ್ಡನೆಕ್ಕುಂದಿ 17, ಹಗದೂರು 15, ಎಚ್‌ಎಸ್‌ಆರ್ ಲೇಔಟ್ 14, ಅರಕೆರೆ 13, ವರ್ತೂರು 13, ಹೊರಮಾವು 12, ನ್ಯೂತಿಪ್ಪಸಂದ್ರ 11, ಕೋರಮಂಗಲ 10, ಹೊಯ್ಸಳ ನಗರ ವಾರ್ಡ್‌ನಲ್ಲಿ 9 ಕೊರೊನಾ ಕೇಸ್ ಗಳಿದ್ದು ಈ ವಾರ್ಡ್ ಗಳನ್ನು ವಲಯಗಳನ್ನಾಗಿ ಗುರುತಿಸುವ ಸಾಧ್ಯತೆ ಇದೆ.