alex Certify Big News: ಓಮಿಕ್ರಾನ್​ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಓಮಿಕ್ರಾನ್​ ರೂಪಾಂತರಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿ

ವಿಶ್ವದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಓಮಿಕ್ರಾನ್​ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೊಸದಾದ ಹಾಗೂ ಇನ್ನಷ್ಟು ಅಪಾಯಕಾರಿ ರೂಪಾಂತರಿಗಳು ಸೃಷ್ಟಿಯಾಗಲು ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಹೊಸ ಓಮಿಕ್ರಾನ್​ ರೂಪಾಂತರಿಯು ಪ್ರಪಂಚದಾದ್ಯಂತ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಎಮರ್ಜೆನ್ಸಿ ಆಫೀಸರ್​​ ಕ್ಯಾಥರೀನ್​​ ಸ್ಮಾಲ್ವುಡ್​​ ಹೇಳಿದರು.

ಓಮಿಕ್ರಾನ್​ ದಿನದಿಂದ ದಿನಕ್ಕೆ ಗಂಭೀರ ಪ್ರಮಾಣದಲ್ಲಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾದ ಇನ್ನಷ್ಟು ತಳಿಗಳು ಸೃಷ್ಟಿಯಾಗುವ ಸಾಧ್ಯತೆಗಳು ದಟ್ಟವಾಗಿರುತ್ತದೆ. ಓಮಿಕ್ರಾನ್​ ಮಾರಣಾಂತಿಕ ಅಥವಾ ಸಂಭಾವ್ಯ ಮಾರಣಾಂತಿಕವಾಗಿದೆ. ಬಹುಶಃ ಇದು ಡೆಲ್ಟಾಗಿಂತ ಕಡಿಮೆ ಮಾರಣಾಂತಿಕ ಇರಬಹುದು ಎಂದು ಸಂದರ್ಶನವೊಂದರಲ್ಲಿ ಸ್ಮಾಲ್ವುಡ್​ ಹೇಳಿದರು.

ಓಮಿಕ್ರಾನ್​ ಕಡಿಮೆ ಪ್ರಮಾಣದ ಗಂಭೀರತೆ ಹೊಂದಿರುವುದರಿಂದ ವಿಜ್ಞಾನಿಗಳು ಈ ಓಮಿಕ್ರಾನ್​ ರೂಪಾಂತರಿಯು ಸಾಂಕ್ರಾಮಿಕ ವೈರಸ್​ನ ತೀವ್ರತೆಯನ್ನು ಕಡಿಮೆ ಮಾಡಬಹುದು. ರೋಗವು ನಿವಾರಣೆಗೊಂಡ ಬಳಿಕ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂಬ ಭರವಸೆಯನ್ನು ಹೊಂದಿದ್ದಾರೆ.

ಆದರೆ ಕೊರೊನಾ ಆರಂಭವಾದಾಗಿನಿಂದ ಯುರೋಪ್​ನಲ್ಲಿ 100 ದಶಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ 2021ರ ಕೊನೆಯ ವಾರವೊಂದರಲ್ಲಿಯೇ 5 ದಶಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಸ್ಮಾಲ್ವುಡ್​ ಹೇಳಿದರು.

ಪ್ರಸ್ತುತ ನಾವು ಅತ್ಯಂತ ಅಪಾಯಕಾರಿ ಹಂತದಲ್ಲಿದ್ದೇವೆ. ಪಶ್ಚಿಮ ಯುರೋಪ್​ನಲ್ಲಂತೂ ಸೋಂಕಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ ಓಮಿಕ್ರಾನ್​ ರೂಪಾಂತರಿಯ ಸಂಪೂರ್ಣ ಪರಿಣಾಮವು ಇನ್ನೂ ಸ್ಪಷ್ಟವಾಗಿಲ್ಲ. ಫ್ರಾನ್ಸ್​ನಲ್ಲಿ ಇದೀಗ ಹೊಸ ಕೋವಿಡ್ ರೂಪಾಂತರಿಯೊಂದು ಪತ್ತೆಯಾಗಿದೆ. ಇದಕ್ಕೆ ಐಹೆಚ್​ಯು ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದೆ. ಇದೆಲ್ಲವೂ ನಮಗೆ ಎಚ್ಚರಿಕೆಯ ಕರೆಘಂಟೆಯಾಗಿದೆ ಎಂದು ಸ್ಮಾಲ್ವುಡ್​ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...