ಬಾಗಲಕೋಟೆ: ಜಿಲ್ಲೆಯ ಕುಳಗೇರಿ ಕ್ರಾಸ್ ನಲ್ಲಿ ದುಷ್ಕರ್ಮಿಗಳು ಅಂಗನವಾಡಿ ದೋಚಿದ್ದಲ್ಲದೇ, ದುಷ್ಕೃತ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಅಂಗನವಾಡಿ ಕೇಂದ್ರದಲ್ಲಿನ ವಸ್ತುಗಳನ್ನು ದೋಚಿದ್ದಲ್ಲದೇ ಅಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಅಂಗನವಾಡಿ ಕೇಂದ್ರದ ಕೀಲಿ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಅಲ್ಲಿಟ್ಟಿದ್ದ ದವಸ ಧಾನ್ಯ, ಸಕ್ಕರೆ, ಬೇಳೆ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಳವಾಗುತ್ತಿದ್ದು, ಹಲವರು ದೂರು ನೀಡದೆ ಸುಮ್ಮನಿದ್ದಾರೆ. ಆದರೆ, ಅಂಗನವಾಡಿ ಕೇಂದ್ರದಲ್ಲಿನ ಕಳ್ಳತನ ಮಾಡಿದ್ದಲ್ಲದೇ, ಈ ರೀತಿ ವಿಕೃತಿ ಮೆರೆದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.