alex Certify BIG BREAKING: 2 ವಾರ ಶಾಲೆಗಳು ಬಂದ್, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್, ವೀಕೆಂಡ್ ಕರ್ಫ್ಯೂ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: 2 ವಾರ ಶಾಲೆಗಳು ಬಂದ್, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್, ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

ರಾಜ್ಯದಲ್ಲಿ ಕೊರೋನಾ ತೀವ್ರ ಏರಿಕೆ, ಪಾಸಿಟಿವಿಟಿ ದರ ಹೆಚ್ಚಳ, ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಅಧಿಕಾರಿಗಳು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರು, ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಅನೇಕ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಹಲವು ಹೊಸ ನಿಯಮ ಜಾರಿಗೆ ತರಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ವೈಜ್ಞಾನಿಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮತ್ತು ಹಲವು ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿ ತಜ್ಞರ ವರದಿ ಆಧರಿಸಿ ನಿಯಮ ಜಾರಿಗೊಳಿಸಲಾಗುವುದು. ಬೆಂಗಳೂರಲ್ಲಿ ಈ ಕ್ಷಣದವರೆಗೆ 3048 ಕೊರೋನಾ, ಒಮಿಕ್ರಾನ್ 148 ಒಮಿಕ್ರಾನ್ ಕೇಸ್ ಕಂಡು ಬಂದಿದ್ದು, ಕೊರೋನಾ 2 -3 ದಿನಗಳಲ್ಲಿ ದ್ವಿಗುಣ ಆಗುತ್ತಿದೆ ಎಂದರು.

ಬೆಂಗಳೂರಿಗೆ ಮತ್ತು ರಾಜ್ಯಕ್ಕೆ ಪ್ರತ್ಯೇಕ ರೂಲ್ಸ್ ತರಲಾಗಿದೆ. ಸಿಎಂ ಬಹಳ ಯೋಚನೆ ಮಾಡಿ ರೂಲ್ಸ್ ಜಾರಿಗೆ ಸೂಚಿಸಿದ್ದಾರೆ. ಮೆಟ್ರೋ ಸಿಟಿ ಬೆಂಗಳೂರಲ್ಲಿ ಶೇ. 85 ರಷ್ಟು ಕೇಸ್ ಗಳಿವೆ. ಪರಿಸ್ಥಿತಿ ಹೀಗಿರುವಾಗ ರಾಜ್ಯದಲ್ಲಿ ಪಾಸಿಟಿವಿ ದರ ಜಾಸ್ತಿಯಾಗಿದೆ ಎಂದರು.

20 -50 ವರ್ಷದವರಲ್ಲಿ ಕೇಸ್ ಹೆಚ್ಚಾಗಿದೆ.

ನಾಳೆ ರಾತ್ರಿ 10 ಗಂಟೆಗೆ ಹೊಸ ರೂಲ್ಸ್ ಜಾರಿಗೆ ಬರಲಿದೆ.

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಗೆ ಬರಲಿದೆ.

ಆಹಾರ, ಹಾಲು, ಔಷಧ, ಸೇರಿ ಅಗತ್ಯವಸ್ತು ಅವಕಾಶವಿದೆ.

ಚಿತ್ರಮಂದಿರ, ಬಾರ್, ಸರ್ಕಾರಿ ಕಚೇರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯವಾಗಲಿದೆ.

ಎರಡು ವಾರ ಶಾಲೆಗಳನ್ನು ಬಂದ್ ಮಾಡಲಾಗುವುದು. ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿವರೆಗೆ ಹೊರತುಪಡಿಸಿ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ

ಬೆಂಗಳೂರಿನಲ್ಲಿ ಒಂದರಿಂದ 9ನೇ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ.

ಮದುವೆ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಜನ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಭಾಗವಹಿಸಬೇಕು

ಜೊತೆಗೆ ನಾಳೆ ರಾತ್ರಿ 10 ಗಂಟೆಯಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿವೆ. ಎರಡು ವಾರಗಳ ಕಾಲ ಕರ್ಫ್ಯೂ ಮುಂದುವರೆದಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಯಾವುದೇ ರ್ಯಾಲಿ, ಪ್ರತಿಭಟನೆ, ಜಾತ್ರೆ, ಜನ ಗುಂಪು ಸೇರಲು ಅವಕಾಶ ಇರುವುದಿಲ್ಲ. ಎಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ಇದು ಯಾರೋ ಒಬ್ಬರಿಗೆ ಅನ್ವಯವಾಗುವುದಿಲ್ಲ. ಎಲ್ಲರಿಗೂ ಅನ್ವಯವಾಗುವಂತೆ ರಾಜ್ಯದ ಜನರ ಆರೋಗ್ಯದ ಮತ್ತು ಜೀವದ ಹಿತದೃಷ್ಟಿಯಿಂದ ನಿಯಮ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ನಾಳೆಯಿಂದ ಎಲ್ಲ ಸಂಘ, ಸಂಸ್ಥೆ ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರಿಗೂ ಅನ್ವಯವಾಗುವಂತೆ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...