ಪಂಚಾಂಗದ ಪ್ರಕಾರ, ಶನಿ ಮತ್ತು ಸೂರ್ಯ ಪ್ರಮುಖ ಗ್ರಹಗಳು. ಇವುಗಳಲ್ಲಿ ಯಾವುದಾದರೂ ಒಂದು ಜಾತಕದಲ್ಲಿ ಅಶುಭವಾಗಿದ್ದರೆ ವ್ಯಕ್ತಿಯು ತೊಂದರೆಗೆ ಸಿಲುಕುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗೆಯೇ ಶನಿ ಮತ್ತು ಸೂರ್ಯ ಪರಸ್ಪರ ಶತ್ರುಗಳೆಂದು ಸಹ ಉಲ್ಲೇಖಿಸಿದ್ದಾರೆ. ಹಾಗಾಗಿ ಶನಿ ಮತ್ತು ಸೂರ್ಯ ಜಾತಕದಲ್ಲಿ ಮುಖಾಮುಖಿಯಾದಾಗ ಅಥವಾ ಸಂಯೋಗ ಉಂಟಾದಾಗ ಹೆಚ್ಚಿನ ಪ್ರಭಾವ ಬೀರಲಿದೆ. 10 ದಿನಗಳ ನಂತರ ಇದೇ ಪರಿಸ್ಥಿತಿ ಎದುರಾಗಲಿದೆ.
ಜನವರಿ 14, 2022 ರಂದು ಶುಕ್ರವಾರ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಆದರೆ ಈ ರಾಶಿಚಕ್ರದಲ್ಲಿ ಶನಿ ಈಗಾಗಲೇ ಇರುವುದರಿಂದ ಮುಂಬರುವ ಫೆಬ್ರವರಿ 13 ರ ಸಮಯಕ್ಕೆ ಮಕರ ಸಂಕ್ರಾಂತಿಯಲ್ಲಿ ಶನಿ ಹಾಗೂ ಸೂರ್ಯ ಸಂಯೋಗ ಉಂಟಾಗುತ್ತದೆ. ಇದರಿಂದಾಗಿ 5 ರಾಶಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತವೆ.
ಮೇಷ ರಾಶಿಯವರಿಗೆ ಶನಿ-ಸೂರ್ಯನ ಸಂಯೋಗವು ಬಹಳಷ್ಟು ಪ್ರಯೋಜನವನ್ನು ತರುತ್ತದೆ. ಇದು ಕೆಲಸದಲ್ಲಿ ಪ್ರಗತಿಯನ್ನು ಹಾಗೂ ಬಡ್ತಿ ಹೆಚ್ಚಿಸುವ ಹೆಚ್ಚಿನ ಅವಕಾಶಗಳಿವೆ. ಆದಾಯ ಹಾಗೂ ಗೌರವವೂ ಹೆಚ್ಚಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಾಣಲಿದೆ.
ಈ ಒಂದು ತಿಂಗಳಲ್ಲಿ ಸಿಂಹ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಸಿಂಹ ರಾಶಿಯವರು ಗೌರವವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಹಳೆಯ ಬಾಕಿ ಇರುವ ಹಣ ಸಿಗುವ ಸಾಧ್ಯತೆ ಹೆಚ್ಚು. ಜೀವನವನ್ನು ಹೆಚ್ಚು ಆನಂದಿಸುವಿರಿ.
ತುಲಾ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ನೀವು ಪಡೆದಷ್ಟು ಹಣವನ್ನು ಭವಿಷ್ಯಕ್ಕಾಗಿ ಉಳಿಸುತ್ತೀರಿ. ಆಸ್ತಿಯನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ.
ವೃಶ್ಚಿಕ ರಾಶಿಯವರಿಗೆ ಈ ಅವಧಿಯು ಹಣ ಮತ್ತು ಗೌರವ ಎರಡನ್ನೂ ತರುತ್ತದೆ. ಆರೋಗ್ಯವೂ ವೃದ್ಧಿಸುತ್ತದೆ. ಕುಟುಂಬದ ಸದಸ್ಯರಿಂದ ಆರ್ಥಿಕ ಸಮಸ್ಯೆಗಳಿಗೆ ಸಹಾಯ ಸಿಗಲಿದೆ. ಯಾವುದೇ ಪ್ರಶಸ್ತಿ ಅಥವಾ ಸಾಧನೆಯ ಅವಕಾಶಗಳಿವೆ.