ಸದ್ಯ ಜಗತ್ತಿನಲ್ಲಿ ಕೊರೊನಾ ರೂಪಾಂತರಿಯ ಹೊಸ ತಳಿಯ ಹಾವಳಿ ಹೆಚ್ಚಾಗುತ್ತಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ಆದರೆ, ಓಮಿಕ್ರಾನ್ ಸೌಮ್ಯ ಸ್ವಭಾವ ಹೊಂದಿದೆ ಎಂದು ತಜ್ಞರು ಹೇಳಿದ್ದರೂ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಮಾಹಿತಿಗೆ ಮತ್ತಷ್ಟು ಆತಂಕ ಮನೆ ಮಾಡುತ್ತಿದೆ.
ಓಮಿಕ್ರಾನ್ ಸೋಂಕು ಗಂಟಲು, ಮೂಗಿಗೆ ಹಾನಿಯಾಗಲಿದ್ದು, ಉಸಿರಾಟ ವ್ಯವಸ್ಥೆಯ ಮೇಲ್ಭಾಗದ ಅಂಗಗಳಿಗೆ ತುಂಬಾ ಹಾನಿಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಜಗತ್ತಿನ ವಿವಿಧ ದೇಶಗಳಲ್ಲಿನ ಹಲವು ಪ್ರಕರಣಗಳನ್ನು ಗಮನಿಸಿದರೆ, ಉಸಿರಾಟ ವ್ಯವಸ್ಥೆಯ ಹಲವು ಅಂಗಗಳಿಗೆ ಹಾನಿಯಾಗಿರುವ ಕುರಿತು ಸಾಕ್ಷ್ಯಗಳು ಸಿಕ್ಕಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆದರೂ ಸದ್ಯದ ಗುಣಲಕ್ಷಣ ಗಮನಿಸುವುದಾದರೆ ರೋಗ ಲಕ್ಷಣ ಕಡಿಮೆಯಾಗಿರುತ್ತದೆ. ಹೀಗಾಗಿ ಈ ವೈರಸ್ ನಿಂದಲೂ ಜನರು ಎಚ್ಚರಿಕೆಯಿಂದಲೇ ವರ್ತಿಸಬೇಕು ಎಂದು ಹೇಳಿದ್ದಾರೆ.