ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ. 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ. ಅರೆವಾಹಕ ಹಾಗೂ ಪೂರೈಕೆಯ ಕೊರತೆ ನಡುವೆಯು ಈ ಹೆಚ್ಚಳ ಕಂಡು ಬಂದಿದೆ. 2019 ರಲ್ಲಿ ಭಾರತದ ಮಾರ್ಕೆಟ್ ಗೆ ಎಂಟ್ರಿ ಕೊಟ್ಟ ಕಿಯಾ ಇಲ್ಲಿವರೆಗೂ 4.5 ಲಕ್ಷ ಕಾರುಗಳನ್ನ ಸೇಲ್ ಮಾಡಿದೆ.
2021 ರಲ್ಲಿ ಭಾರತದ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 29 ರಷ್ಟು ಏರಿಕೆಯಾಗಿ 1,81,583 ಯುನಿಟ್ಗಳಿಗೆ ತಲುಪಿದೆ. ಭಾರತದ ಆಟೋಮೊಬೈಲ್ ನ 6% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿರುವ ಕಿಯಾ, ದೇಶದ ಅಗ್ರ ಐದು ಕಾರು ತಯಾರಕರಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಅದರಲ್ಲು ಕಿಯಾ ಸೆಲ್ಟೋಸ್ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದ 2,00,000 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟದ ಅಂಕಿಅಂಶಕ್ಕೆ ಅತಿದೊಡ್ಡ ಕೊಡುಗೆ ನೀಡಿದೆ. 2021 ರಲ್ಲಿ, ಕಿಯಾ 98,168 ಯುನಿಟ್ ಸೆಲ್ಟೋಸ್ ಮತ್ತು 79,309 ಯುನಿಟ್ ಸೋನೆಟ್ ಮಾಡೆಲ್ ಗಳನ್ನ ಮಾರಾಟ ಮಾಡಿದೆ. ಮತ್ತೊಂದೆಡೆ 4,178 ಯುನಿಟ್ ಕಿಯಾ ಕಾರ್ನಿವಲ್ MPV ಮಾರಾಟವಾಗಿವೆ.
ಕಳೆದ ವರ್ಷದಲ್ಲಿ 46,261 ಯುನಿಟ್ಗಳನ್ನು ರಫ್ತು ಮಾಡಿದೆ, ಇದು 2020ರಲ್ಲಿ ರಫ್ತು ಮಾಡಿದ್ದಕ್ಕಿಂತ ಶೇ.23 ರಷ್ಟು ಹೆಚ್ಚು. ಕಿಯಾ ಕಂಪನಿಯು ಕ್ಯಾರೆನ್ಸ್ ಅನ್ನೋ ಹೊಸ ಮಾದರಿ ಕಾರನ್ನ 2022ರ ಜನವರಿ 14ರಂದು ಬಿಡುಗಡೆ ಮಾಡಲಿದೆ. ಇದು ಕಿಯಾ ಕಾರಿನ ನಾಲ್ಕನೇ ಉತ್ಪನ್ನವಾಗಿದೆ.