![](https://kannadadunia.com/wp-content/uploads/2021/12/corona.png)
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 2479 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 2053 ಜನರಿಗೆ ಸೋಂಕು ತಗುಲಿದೆ.
ಪಾಸಿಟಿವಿಟಿ ದರ ಶೇಕಡ 2.59 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. 95,391 ಪರೀಕ್ಷೆ ನಡೆಸಲಾಗಿದೆ. ಇಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿಲ್ಲ. ಇದುವರೆಗೆ 77 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.
ಎರಡು ಮೂರು ದಿನಗಳಿಂದ ಒಂದು ಸಾವಿರ ಆಸುಪಾಸಿನಲ್ಲಿದ್ದ ಕೇಸ್ ಗಳು ಇಂದು ಸುಮಾರು ಎರಡೂವರೆ ಸಾವಿರದ ಸನಿಹಕ್ಕೆ ಬಂದಿದೆ. ಪಾಸಿಟಿವಿಟಿ ದರ ಕೂಡ ಡಬಲ್ ಆಗಿರುವುದು ಆತಂಕಕಕ್ಕೆ ಕಾರಣವಾಗಿದ್ದು, ಸೋಂಕಿನ ಏರಿಕೆ ಗಮನಿಸಿದಾಗ ಕಠಿಣ ನಿರ್ಬಂಧ ಜಾರಿ ಮಾಡುವುದು ಬಹುತೇಕ ಖಚಿತವೆನ್ನಲಾಗಿದೆ.