ಪಾಲಕ್ಕಾಡ್: ಕೇರಳದ ಪೊಲೀಸ್ ಠಾಣೆಗೆ ಕೆಲವು ಅನಗತ್ಯ ಸಂದರ್ಶಕರು ಹೇಗೆ ನುಗ್ಗಿ ಪ್ರವೇಶ ದ್ವಾರವನ್ನು ಧ್ವಂಸ ಮಾಡಿದ್ದಾರೆ ಎಂಬುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಧ್ವಂಸಕ ಕೃತ್ಯ ನಡೆಸಿದ್ದು ಯಾರು ಗೊತ್ತಾ..?
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಲಂ ಪೊಲೀಸ್ ಠಾಣೆಯೊಳಗೆ ಆನೆ ಹಾಗೂ ಮರಿಯಾನೆ ಒಳ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ. ಆನೆ ಮತ್ತು ಮರಿಯಾನೆ ಕಬ್ಬಿಣದ ಗ್ರಿಲ್ ಹಿಂದೆ ಇಣುಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಒಳ ಪ್ರವೇಶಿಸಲು ಪ್ರಯತ್ನಪಟ್ಟ ಈ ಪ್ರಾಣಿಗಳು ಕಬ್ಬಿಣದ ಗ್ರಿಲ್ ಮತ್ತು ಪ್ರವೇಶದ್ವಾರವನ್ನು ಹಾನಿಗೊಳಿಸಿದ್ದಾವೆ.
ಈ ವಿಡಿಯೋವನ್ನು ಕೇರಳ ಪೊಲೀಸರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ತಾಯಿ ಮತ್ತು ಮಗು ಪರಂಬಿಕುಲಂ ಪೊಲೀಸ್ ಠಾಣೆಗೆ ತಲುಪಿದಾಗ ಏನು ಮಾಡಿದರು ಎಂದು ತಿಳಿಯಲು ಈ ವಿಡಿಯೋವನ್ನು ನೋಡಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಸಸ್ಪೆನ್ಸ್ ಆಗಿ ರಚಿಸಲು ಇದಕ್ಕೆ ಕೆಲವು ಡೈಲಾಗ್ ಗಳು ಹಾಗೂ ಮ್ಯೂಸಿಕ್ ಅನ್ನು ಕೂಡ ಸೇರಿಸಿದ್ದಾರೆ.
ಜನವರಿ 2 ರಂದು ಪೋಸ್ಟ್ ಮಾಡಲಾದ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್ಗಳನ್ನು ಗಳಿಸಿದೆ.