ರಾಮನಗರದಲ್ಲಿ ನೆನ್ನೆ ನಡೆದ ಸಚಿವರ ಗಲಾಟೆ ಇಂದು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಸಚಿವ ಅಶ್ವತ್ಥ್ ನಾರಾಯಣ್ ಪರವಾಗಿ ನಿಂತಿರುವ ಬಿಜೆಪಿ ಯುವ ಮೋರ್ಚಾ ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಿದೆ.
ಸದಾಶಿವನಗರದ ಸರ್ಕಲ್ ನಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಡಿ.ಕೆ. ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಡಿ.ಕೆ.ಶಿ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಡಿ.ಕೆ.ಶಿ ಹಾಗೂ ಡಿ.ಕೆ.ಎಸ್ ಅವ್ರದ್ದು ಗೂಂಡಾ ಪ್ರವರ್ತನೆ ಅವರ ವರ್ತನೆಯನ್ನ ಎಂಎಲ್ಸಿ ರವಿ ಸಮರ್ಥಿಸಿಕೊಂಡಿದ್ದಾರೆ. ಅಣ್ಣತಮ್ಮಂದಿರ ಗೂಂಡಾ ವರ್ತನೆಗೆ ಧಿಕ್ಕಾರ ಎಂದು ಕೂಗಿ, ಪೋಸ್ಟರ್ ಗಳನ್ನ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಡಿ.ಕೆ. ಸುರೇಶ್ ಮನೆ ಮುತ್ತಿಗೆ ಹಾಕಲು ಪ್ರತಿಭಟನಕಾರರ ಪ್ರಯತ್ನ..!
ಸದಾಶಿವನಗರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು, ಇದ್ದಕ್ಕಿದ್ದಂತೆ ಅದೇ ಏರಿಯಾದಲ್ಲಿರೊ ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ಆದರೆ ಈ ಮೊದಲೇ ಮುನ್ನೆಚ್ಚರಿಕಾ ಕ್ರಮವಾಗಿ ಡಿ.ಕೆ.ಎಸ್. ಮನೆಗೆ ಪೊಲೀಸರನ್ನ ನಿಯೋಜಿಸಲಾಗಿತ್ತು, ಜೊತೆಗೆ ಪ್ರತಿಭಟನಾ ಸ್ಥಳದಲ್ಲೂ ಎರಡು ಕೆಎಸ್ಆರ್ಪಿ ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿತ್ತು. ಬ್ಯಾರಿಕೇಡ್ ಗಳನ್ನ ಮೀರಿ ಡಿ.ಕೆ.ಎಸ್ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ನೂರಾರು ಪ್ರತಿಭಟನಾಕಾರರನ್ನು ತಡೆದಿರುವ ಪೊಲೀಸರು, ಅವರನ್ನ ವಶಕ್ಕೆ ಪಡೆದಿದ್ದಾರೆ.