ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಕೆಲಸದ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಿದೆ.
ಬಯೋಮೆಟ್ರಿಕ್ಸ್ ಹಾಜರಾತಿ ವ್ಯವಸ್ಥೆಯನ್ನು ಅಮಾನತುಗೊಳಿಸುವುದರಿಂದ ಹಿಡಿದು, ಅತಿಯಾದ ದಟ್ಟಣೆ ತಪ್ಪಿಸಲೆಂದು ಸಡಿಲಗೊಳಿಸಲಾದ ವೇಳಾಪಟ್ಟಿಯವರೆಗೂ ಈ ಮಾರ್ಗಸೂಚಿಗಳ ಮೂಲಕ ಕೆಲವೊಂದು ಬದಲಾವಣೆಗಳನ್ನು ಪರಿಚಯಿಸಲಾಗಿದೆ.
Corona Update: 1705 ಜನರಿಗೆ ಸೋಂಕು, 30 ಮಂದಿ ಸಾವು; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ
* ಕಾರ್ಯದರ್ಶಿಗಳ ಕೆಳಗಿನ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರ ದೈಹಿಕ ಹಾಜರಾತಿಯನ್ನು 50%ಗೆ ಇಳಿಸಲಾಗಿದೆ. ಮಿಕ್ಕ ನೌಕರರು ಮನೆಗಳಿಂದಲೇ ಕೆಲಸ ಮಾಡಬಹುದು.
* ಅಂಗಾಂಗ ನ್ಯೂನತೆ ಇರುವವರು, ಗರ್ಭಿಣಿ ಹೆಂಗಸರು ಮನೆಗಳಿಂದಲೇ ಕೆಲಸ ಮಾಡಹುದು.
* ಕಂಟೇನ್ಮೆಂಟ್ ವಲಯಗಳಲ್ಲಿರುವ ಸರ್ಕಾರಿ ಅಧಿಕಾರಿಗಳು/ಸಿಬ್ಬಂದಿ ಆ ವಲಯಗಳು ಕಂಟೇನ್ಮೆಂಟ್ ಪಟ್ಟಿಯಿಂದ ಆಚೆ ಬರುವವರೆಗೂ ಕಚೇರಿಗೆ ಬಂದು ಕೆಲಸ ಮಾಡಬೇಕಾದ ಅಗತ್ಯವಿಲ್ಲ.
* ಜನವರಿ 31ರವರೆಗೂ ಕೇಂದ್ರ ಸರ್ಕಾರದ ಎಲ್ಲಾ ನೌಕರರಿಗೆ ಬಯೋಮೆಟ್ರಿಕ್ಸ್ ಹಾಜರಾತಿಯನ್ನು ಸಿಬ್ಬಂದಿ ಇಲಾಖೆ ರದ್ದು ಪಡಿಸಿದೆ.
* ಎಲ್ಲಾ ಇಲಾಖೆಗಳ ಮುಖ್ಯಸ್ಥರೂ ಸಹ ತಮ್ಮ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್‌ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಖಾತ್ರಿ ಪಡಿಸಬೇಕು.