ಪಿಂಚಣಿ ಖಾತೆದಾರರು ತಮ್ಮ ಮೊತ್ತಕ್ಕೆ ನಾಮಿನಿ ಅಥವಾ ವಾರಸುದಾರರ ಹೆಸರನ್ನು ಬದಲಾವಣೆ ಮಾಡಲು ಆನ್‌ಲೈನ್‌ನಲ್ಲಿಅವಕಾಶ ನೀಡಲಾಗಿದೆ. ಇಪಿಎಫ್ ಸಂಸ್ಥೆ ಈ ವ್ಯವಸ್ಥೆ ಮಾಡಿದೆ.
ಪಿಂಚಣಿ ಮಾಹಿತಿ ಸಿಗುವ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಆಗಿರುವ https://www.epfindia.gov.in ಗೆ ಲಾಗಿನ್ ಆಗಬೇಕು. ನಂತರ ಹೊಸ ನಾಮಿನಿಯನ್ನು ಸುಲಭವಾಗಿ ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.
ಯಾವುದೇ ಮೂರನೇ ವ್ಯಕ್ತಿಯ ಸಹಾಯ ಇಲ್ಲದೆಯೇ ಪಿಎಫ್ ಖಾತೆದಾರರು ತಾವೇ ತಾವಾಗಿ ಸ್ಮಾರ್ಟ್‌ಫೋನ್‌ನಲ್ಲಿಯೇ ನಾಮಿನಿ ಬದಲಾವಣೆ ಮಾಡಲು ಅನುಕೂಲ ಆಗಲಿ ಎಂಬ ಉದ್ದೇಶ ಇದರ ಹಿಂದಿದೆ.
ಈ ಮುಂಚೆ ಆನ್‌ಲೈನ್ ಅವಕಾಶ ಇಲ್ಲದೆಯೇ, ಫಾರ್ಮ್ ನಂ. 2 ಭರ್ತಿ ಮಾಡಿ ಸಲ್ಲಿಕೆ ಮಾಡಿದರೆ ಮಾತ್ರವೇ ನಾಮಿನಿ ಬದಲಾವಣೆ ಮಾಡಲಾಗುತ್ತಿತ್ತು. ವೆಬ್‌ಸೈಟ್‌ಗೆ ಲಾಗಿನ್ ಆಗುವ ಹೊಸಬರು ತಮ್ಮ ಯುಎಎನ್ ಸಂಖ್ಯೆ ಪಡೆಯುವುದು ಮುಖ್ಯವಾಗಿದೆ. ಇನ್ನು, ಈಗಾಗಲೇ ಯುಎಎನ್ ಸಂಖ್ಯೆ ಪಡೆದಿರುವವರು ಅದನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
BIG BREAKING: ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳ; ಒಂದೇ ದಿನ 124 ಜನ ಮಹಾಮಾರಿಗೆ ಬಲಿ
ನಾಮಿನಿ ಬದಲಾವಣೆ ಮಾದರಿ ಹೀಗಿದೆ:
https://www.epfindia.gov.in ಲಾಗಿನ್ ಆಗಿರಿ.
ಇದರಲ್ಲಿಸೇವೆಗಳು/ಸರ್ವಿಸಸ್ ಆಯ್ಕೆ ಮಾಡಿರಿ, ಅದರಲ್ಲಿ ಫಾರ್ ಎಂಪ್ಲಾಯ್ಸ್/ಉದ್ಯೋಗಿಗಳು ಆಯ್ಕೆ ಮಾಡಿರಿ.
ಯುಎಎನ್/ಆನ್‌ಲೈನ್ ಸೇವೆ (ಒಸಿಎಸ್/ಒಟಿಸಿಪಿ) ಬಟನ್ ಒತ್ತಿರಿ.
ಯುಎಎನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ದಾಖಲಿಸಿ ಲಾಗಿನ್ ಆಗಿರಿ. ಮ್ಯಾನೇಜ್ /ನಿರ್ವಹಿಸು ಬಟನ್ ಒತ್ತಿರಿ ಹಾಗೂ ಇ-ನಾಮಿನೇಷನ್ ಆಯ್ಕೆ ಮಾಡಿರಿ.
ಫ್ಯಾಮಿಲಿ ಡಿಕ್ಲರೇಷನ್ ಬದಲಾವಣೆಗೆ ’ಯೆಸ್’ ಎಂದು ನಮೂದಿಸಿ, ಬಳಿಕ ಕೌಟುಂಬಿಕ ವಿವರ/ ಆಡ್ ಫ್ಯಾಮಿಲಿ ಡಿಟೇಲ್ಸ್ ಆಯ್ಕೆ ಮಾಡಿರಿ. ನಾಮಿನೇಷನ್ ಡಿಟೇಲ್ಸ್‌ನಲ್ಲಿ ಪಿಎಫ್ ಮೊತ್ತದ ಎಷ್ಟು ಭಾಗ ನಾಮಿನಿಗೆ ಸೇರಬೇಕು ಎಂದು ನಮೂದಿಸಿರಿ. ಬಳಿಕ ನಿಮ್ಮ ಆಯ್ಕೆಗಳನ್ನು ಸೇವ್ ಇಪಿಎಫ್ ನಾಮಿನೇಷನ್ ಮೂಲಕ ಉಳಿಸಿಕೊಳ್ಳಿರಿ.
ಒಟಿಪಿ ಪಡೆಯಲು ’’ಇ-ಸೈನ್’’ ಆಯ್ಕೆ ಮಾಡಿರಿ. ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಒಟಿಪಿಯನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಿದ ನಂತರ ಇಪಿಎಫ್ ಸಂಸ್ಥೆಯು ನಿಮ್ಮ ಹೊಸ ಅರ್ಜಿ ಸ್ವೀಕೃತಿ ಮಾಡಿದೆ ಎಂದರ್ಥ.
ಒಬ್ಬರಿಗಿಂತ ಹೆಚ್ಚು ನಾಮಿನಿಗಳನ್ನು ಪಿಎಫ್ ಮೊತ್ತಕ್ಕೆ ಸೇರಿಸಬಹುದು. ಅಂದರೆ, ಪಿಎಫ್ ಮೊತ್ತದ 50% ಪತ್ನಿಗೆ , ಉಳಿದ ಮೊತ್ತ ಮಗ ಅಥವಾ ಮಗಳಿಗೆ ಸೇರುವಂತೆ ಮಾಡಬಹುದು.