alex Certify ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ.

ಈ ಬೈಕುಗಳಿಗೆ ಎಲ್‌ಇಡಿಯ ಮುಂಬದಿ ಹಾಗೂ ಹಿಂಬದಿ ದೀಪಗಳನ್ನು ಯಾವುದೇ ಶುಲ್ಕವಿಲ್ಲದೆ ಅಳವಡಿಸಿಕೊಳ್ಳಲಾಗುವುದು ಎಂದು ಯಮಾಹಾ ತಿಳಿಸಿದೆ.

ಲೈಂಗಿಕ ಕಿರುಕುಳ; ಶಿಕ್ಷಕರಿಬ್ಬರ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿಯರು

ಆಕರ್ಷಕ ಗ್ರಾಫಿಕ್ಸ್ ಜೊತೆಗೆ ಡಿಲಕ್ಸ್‌ ಅವತಾರಿಯು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿದ್ದು, ವಿಶಿಷ್ಟವಾದ ಆಸನಗಳನ್ನು ಹೊಂದಲಿವೆ. ಯಮಾಹಾದ ಬ್ಲೂಟೂತ್‌ ಬೆಂಬಲಿತ ಕನ್ಸೋಲ್ ಮೂಲಕ ಆನ್ಸರ್‌ ಬ್ಯಾಕ್ ವ್ಯವಸ್ಥೆ, ಇ-ಲಾಕ್, ಬೈಕ್ ಲೊಕೇಟ್ ಮಾಡುವುದು ಸೇರಿದಂತೆ ಅನೇಕ ಸುಧಾರಿತ ಸೌಲಭ್ಯಗಳನ್ನು ಬೈಕ್ ಹೊಂದಿದೆ.

149ಸಿಸಿ ಏರ್‌ ಕೂಲ್ಡ್ ಸಿಂಗಲ್ ಸಿಲಿಂಡರ್‌ ಪೆಟ್ರೋಲ್ ಇಂಜಿನ್ ಹೊಂದಿರುವ ಈ ಬೈಕ್‌ 12.4 ಎಚ್‌ಪಿ ಮತ್ತು 13.3 ಎನ್‌ಎಂನಷ್ಟು ಟಾರ್ಕ್‌ನ ಶಕ್ತಿ ಉತ್ಪಾದಿಸಬಲ್ಲದು. 5-ಸ್ಪೀಡ್ ಗಿಯರ್‌ ಬಾಕ್ಸ್‌ಅನ್ನು ಇಂಜಿನ್ ಹೊಂದಿದೆ.

2022 ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್‌ನ ಎಕ್ಸ್‌ ಶೋರೂಂ ಬೆಲೆ 1,18,900 ರೂ.ಗಳಷ್ಟಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...