ಮುಂಬೈ: ಆಫ್ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಇಂಟರ್ನೆಟ್ ಸೌಲಭ್ಯವಿಲ್ಲದೇ ಫೀಚರ್ ಫೋನ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ ಎರಡು ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಲು ಮಿತಿ ವಿಧಿಸಲಾಗಿದೆ.
ಫೀಚರ್ ಫೋನ್, ಕಾರ್ಡ್ ವ್ಯಾಲೆಟ್ ಬಳಸಿಕೊಂಡು ಒಂದು ಸಲಕ್ಕೆ 200 ರೂಪಾಯಿಯಂತೆ ಒಂದು ದಿನಕ್ಕೆ ಗರಿಷ್ಠ 2000 ರೂಪಾಯಿ ಹಣ ವರ್ಗಾವಣೆ ಮಾಡಬಹುದಾಗಿದೆ.
ಪ್ರಸ್ತುತ ಇರುವ ಯುಪಿಐ, RTGS, ನೆಫ್ಟ್ ಸೇರಿದಂತೆ ಮೊದಲಾದವುಗಳ ಮೂಲಕ ಹಣ ವರ್ಗಾವಣೆ ಇಂಟರ್ನೆಟ್ ಮೂಲಕ ನಡೆಯುತ್ತದೆ. ಇಂಟರ್ ನೆಟ್ ಸಂಪರ್ಕವಿಲ್ಲದ ಗ್ರಾಮೀಣ ಭಾಗದ ಜನತೆಗೆ ಇಂತಹ ಸೌಲಭ್ಯವಿಲ್ಲದ ಕಾರಣ ಗ್ರಾಮೀಣ ಜನರನ್ನು ಕೂಡಲ ಡಿಜಿಟಲ್ ಪಾವತಿ ವ್ಯವಸ್ಥೆಗೆ ತರಲು ಯೋಜನೆ ರೂಪಿಸಲಾಗಿದೆ. ಇಂಟರ್ನೆಟ್ ಇಲ್ಲದೆಯೂ ಮೊಬೈಲ್ ಬಳಸಿ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಎಸ್ಎಂಎಸ್. ಕ್ಯೂಆರ್ ಕೋಡ್ ಬಳಸಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.