ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ 10 ನೇ ಕಂತು ಬಿಡುಗಡೆ ಮಾಡಲಾಗಿದೆ.
10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಫಲಾನುಭವಿ ರೈತರ ಖಾತೆಗೆ ವರ್ಗಾಯಿಸಲಾಗಿದೆ.
PM-KISAN 10 ನೇ ಕಂತು ಬರದಿದಿದ್ದರೆ ರೈತರು ಏನು ಮಾಡಬೇಕು?
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 10 ನೇ ಕಂತು 2,000 ರೂ. ಜಮಾ ಮಾಡಿದ್ದು, ಕೆಲವು ಅರ್ಹ ರೈತರ ಖಾತೆಗೆ ಹಣ ಜಮಾ ಆಗಿಲ್ಲದಿರಬಹುದು. ಖಾತೆಯಲ್ಲಿ 2000 ರೂ. ಸ್ವೀಕರಿಸದ ರೈತರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ನಿಮ್ಮ ದೂರನ್ನು ಪಿಎಂ ಕಿಸಾನ್ ಹೆಲ್ಪ್ ಡೆಸ್ಕ್ ನಲ್ಲಿ ನೋಂದಾಯಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ನಿಮ್ಮ ದೂರನ್ನು ಸಲ್ಲಿಸಬಹುದು. ಇದಲ್ಲದೆ, ನಿಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು ನೀವು pmkisan-ict@gov.in ಅನ್ನು ಸಹ ಸಂಪರ್ಕಿಸಬಹುದು. ಪರ್ಯಾಯವಾಗಿ, ಈ ನೇರ ಸಹಾಯವಾಣಿ ಸಂಖ್ಯೆ 011-23381092 ಗೆ ಕರೆ ಮಾಡುವ ಮೂಲಕ ನಿಮ್ಮ ಕಂತುಗಳ ಸ್ಥಿತಿಯನ್ನು ನೀವು ತಿಳಿದುಕೊಳ್ಳಬಹುದು. ನೀವು ರೈತರ ಕಲ್ಯಾಣ ವಿಭಾಗವನ್ನು ಸಹ ಸಂಪರ್ಕಿಸಬಹುದು.
PM-KISAN ಯೋಜನೆಯಡಿಯಲ್ಲಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತದೆ. ತಲಾ 2000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.