ಎರಡು ದಿನಗಳ ಹಿಂದೆ ಇಂದೋರ್ ನ ನಿವಾಸಿಯೊಬ್ಬರು ತಮ್ಮ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ಬಳಸಿದ್ದಾರೆ ಎಂದು, ವಿಕ್ಕಿ ಕೌಶಲ್ ಅವರ ಲುಕ್ಕಾಚುಪ್ಪಿ2 ಚಿತ್ರತಂಡದ ವಿರುದ್ಧ ದೂರು ನೀಡಿದ್ದರು. ಇಂದೋರ್ ನಲ್ಲಿ ಚಿತ್ರದ ಶೂಟಿಂಗ್ ನಡೆದಿತ್ತು.
ತನ್ನ ಕೋ ಸ್ಟಾರ್ ಸಾರಾ ಅಲಿಖಾನ್ ಅವ್ರೊಂದಿಗೆ ವಿಕ್ಕಿ ಬೈಕ್ ನಲ್ಲಿ ತೆರಳುತ್ತಿರುವ ಫೋಟೊ ಆನ್ ಲೈನ್ ನಲ್ಲಿ ವೈರಲ್ ಆದ್ಮೇಲೆ, ಆ ದೃಶ್ಯದಲ್ಲಿ ಬಳಸಿರುವ ವಾಹನದ ಸಂಖ್ಯೆ ನನ್ನದು ಎಂದು ಬಂಗಾಂಗ ನಿವಾಸಿ ಜೈ ಸಿಂಗ್ ಯಾದವ್ ದೂರು ನೀಡಿದ್ದರು. ಸಧ್ಯ ಈ ದೂರಿನ ತನಿಖೆ ಮುಗಿಸಿರುವ ಪೊಲೀಸರು ಒಂದು ಬೋಲ್ಟ್ ನಿಂದ ಇಷ್ಟೆಲ್ಲಾ ತಪ್ಪು ತಿಳುವಳಿಕೆಯಾಗಿದೆ ಎಂದು ಹೇಳಿದ್ದಾರೆ.
ಲುಕ್ಕಾಚುಪ್ಪಿ ಸಿನಿಮಾದ ಸೀಕ್ವೆನ್ಸ್‌ನಲ್ಲಿ ಬಳಸಿದ ನಂಬರ್ ಪ್ಲೇಟ್‌ನಲ್ಲಿ ಬೋಲ್ಟ್ ಫಿಕ್ಸ್ ಮಾಡಿದ್ದರಿಂದ ಈ ಘಟನೆ ನಡೆದಿದೆ. ದ್ವಿಚಕ್ರ ವಾಹನವು ದೂರುದಾರರದ್ದಲ್ಲ, ಬದಲಿಗೆ ಚಲನಚಿತ್ರ ನಿರ್ಮಾಣ ಸಂಸ್ಥೆಗೆ ಸೇರಿದೆ.
ನಾವು ಈ ವಿಷಯವನ್ನು ತನಿಖೆ ಮಾಡಿದ್ದೇವೆ ದೂರುದಾರರ ವಾಹನ ಸಂಖ್ಯೆ 4872, ಸಿನಿಮಾದ ದೃಶ್ಯದಲ್ಲಿ ಬಳಸಿರುವ ವಾಹನ ಸಂಖ್ಯೆ 1872. ಆದರೆ 1 ರ ಮೇಲೆಯೆ ಬೋಲ್ಟ್ ಫಿಟ್ ಮಾಡಿರುವುದರಿಂದ ಅದು 4ರಂತೆ ಕಾಣುತ್ತಿದೆ. ಸಿನಿಮಾ ಸಂಸ್ಥೆ ನಂಬರ್ ಪ್ಲೇಟ್ ಬಳಸಲು ಅನುಮತಿ ಪಡೆದುಕೊಂಡಿದೆ, ಇದರಲ್ಲಿ ಯಾವುದೇ ಅಕ್ರಮವಿಲ್ಲ ಎಂದು ಬಂಗಂಗಾ ಎಸ್ಐ ರಾಜೇಂದ್ರ ಸೋನಿ ತಿಳಿಸಿದ್ದಾರೆ.