alex Certify ‘ಓಮಿಕ್ರಾನ್​ ಒಂದು ಸಾಮಾನ್ಯ ಜ್ವರ, ಇದರಿಂದ ಮೂರನೇ ಅಲೆ ಸಾಧ್ಯವಿಲ್ಲ: ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಓಮಿಕ್ರಾನ್​ ಒಂದು ಸಾಮಾನ್ಯ ಜ್ವರ, ಇದರಿಂದ ಮೂರನೇ ಅಲೆ ಸಾಧ್ಯವಿಲ್ಲ: ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹೇಳಿಕೆ

ಓಮಿಕ್ರಾನ್​ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದೆ. ಆದರೆ ಇದು ಸಾಮಾನ್ಯ ಜ್ವರದಂತಹ ಒಂದು ಸೌಮ್ಯವಾದ ಸೋಂಕನ್ನು ಮಾತ್ರ ಉಂಟು ಮಾಡುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಹೀಗಾಗಿ ಯಾರು ಕೂಡ ಕೊರೊನಾದ ಈ ಹೊಸ ರೂಪಾಂತರವು ಕೋವಿಡ್​ ಮೂರನೇ ಅಲೆಗೆ ಕಾರಣವಾಗುತ್ತದೆ ಎಂದು ಭೀತಿಗೊಳಗಾಗಬೇಡಿ ಎಂದು ಹೇಳಿದರು.

ಓಮಿಕ್ರಾನ್​ ಅತ್ಯಂತ ವೇಗವಾಗಿ ಹರಡುತ್ತದೆ. ಆದರೆ ಅತ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ವೈರಸ್​ ಈಗ ತನ್ನ ಪ್ರಭಾವವನ್ನು ಕಳೆದುಕೊಂಡಿದೆ. ಇದೊಂದು ರೀತಿಯಲ್ಲಿ ಸಾಮಾನ್ಯ ಜ್ವರ ಇದ್ದಂತೆ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಓಮಿಕ್ರಾನ್​ ರೂಪಾಂತರಿಯು ಡೆಲ್ಟಾದಷ್ಟು ಮಾರಣಾಂತಿಕವಾಗಿಲ್ಲ. ಓಮಿಕ್ರಾನ್​ ಸೋಂಕಿಗೆ ಒಳಗಾದವರು ಕೇವಲ ನಾಲ್ಕೈದು ದಿನಗಳಲ್ಲೇ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಮಾರ್ಚ್- ಏಪ್ರಿಲ್​ ತಿಂಗಳಲ್ಲಿ ಭೀಕರ ಪರಿಸ್ಥಿತಿಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿಯು ತಗುಲಿದ ವ್ಯಕ್ತಿ ಚೇತರಿಸಿಕೊಳ್ಳಲು 12 ರಿಂದ 25 ದಿನಗಳ ಸಮಯಾವಕಾಶ ಬೇಕಾಗುತ್ತಿತ್ತು. ಆದರೆ ಇದು ಓಮಿಕ್ರಾನ್​ ಪ್ರಕರಣದಲ್ಲಿ ಕಾಣುತ್ತಿಲ್ಲ ಎಂದು ಯೋಗಿ ಹೇಳಿದರು.

ನವೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ ಮೊದಲ ಓಮಿಕ್ರಾನ್​ ಪ್ರಕರಣ ವರದಿಯಾದಾಗಿನಿಂದ ಇಲ್ಲಿಯವರೆಗೆ ಉತ್ತರ ಪ್ರದೇಶದಲ್ಲಿ ಎಂಟು ಮಂದಿ ಓಮಿಕ್ರಾನ್​ ಸೋಂಕಿಗೆ ಒಳಗಾಗಿದ್ದಾರೆ. ಅಂಕಿ ಅಂಶಗಳ ಪೈಕಿ ಇವರಲ್ಲಿ ನಾಲ್ಕು ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಉತ್ತರ ಪ್ರದೇಶ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...