ಪಾಕಿಸ್ತಾನದ ಹೊಸ ಪೀಳಿಗೆಯ ವೇಗಿ ಮೊಹಮ್ಮದ್ ಹಸ್ನೈನ್ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ನಲ್ಲಿ (ಬಿಬಿಎಲ್) ತಮ್ಮ ಪಯಣಕ್ಕೊಂದು ಬಂಪರ್ ಆರಂಭ ಕೊಟ್ಟಿದ್ದಾರೆ. ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಹಸ್ನೈನ್ ಓವರ್ ಒಂದರಲ್ಲಿ ಮೂರು ವಿಕೆಟ್ ಪಡೆದಿದ್ದಲ್ಲದೇ ಮೇಡನ್ ಸಹ ಮಾಡಿದ್ದಾರೆ.
ಸಿಡ್ನಿ ಥಂಡರ್ ಪ್ರತಿನಿಧಿಸುತ್ತಿರುವ ಹಸ್ನೈನ್ ದಾಳಿಗೆ ಸಿಲುಕಿದ ಅಡಿಲೇಡ್ ಸ್ಟ್ರೈಕರ್ಸ್, 20 ಓವರ್ಗಳಲ್ಲಿ 173ರನ್ಗಳ ಗುರಿ ಬೆನ್ನತ್ತುವ ಸಂದರ್ಭದಲ್ಲಿ, ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ಮನ್ಗಳಾದ ಮ್ಯಾಥ್ಯೂ ಶಾರ್ಟ್, ಜೇಕ್ ವೆದರಾಲ್ಡ್ ಮತ್ತು ಜೋನಾಥನ್ ವೆಲ್ಸ್ರನ್ನು ಒಂದೇ ಓವರ್ನಲ್ಲಿ ಪೆವಿಲಿಯನ್ಗಟ್ಟಿ, 25 ರನ್ಗಳಾಗುವಷ್ಟರಲ್ಲಿ ಎದುರಾಳಿಯ ಅಗ್ರ ಕ್ರಮಾಂಕವನ್ನು ಧೂಳೀಪಟ ಮಾಡಿದ್ದರು.
ತಮ್ಮ ಕೋಟಾದ ನಾಲ್ಕು ಓವರ್ಗಳಲ್ಲಿ 20 ರನ್ನಿತ್ತ ಹಸ್ನೈನ್ 3 ವಿಕೆಟ್ ಪಡೆದು, ತಮ್ಮ ತಂಡ 28 ರನ್ಗಳಿಂದ ಗೆಲ್ಲಲು ನೆರವಾದರು.