ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಪ್ರತಿಷ್ಠಿತ ಟ್ರೋಫಿ ಗೆಲ್ಲುವ ಭಾರತದ ಕನಸು ಹಾಗೆಯೇ ಉಳಿದಿದೆ. ಆದರೆ, ಈ ವರ್ಷ ಭಾರತದ ಮುಂದೆ ಮೂರು ಪ್ರಮುಖ ಟ್ರೋಫಿಗಳು ಇವೆ. ಈ ವರ್ಷ ಭಾರತದ ಪಾಲಿಗೆ ಟ್ರೋಫಿಯ ಬರ ನೀಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಭಾರತೀಯ ಪುರುಷರ ತಂಡವು 2013ರಿಂದ ಇಲ್ಲಿಯವರೆಗೂ ಐಸಿಸಿ ಟ್ರೋಫಿ ಗೆದ್ದಿಲ್ಲ. 19 ವರ್ಷದೊಳಗಿನವರ ವಿಶ್ವಕಪ್ ಕೂಡ ಇದೇ ವರ್ಷದಲ್ಲಿದೆ. ಇದುವರೆಗೂ ಮಹಿಳಾ ಕ್ರಿಕೆಟ್ ತಂಡವು ಒಂದೇ ಒಂದು ಕಪ್ ಗೆದ್ದಿಲ್ಲ. 2018ರಲ್ಲಿಯೇ ಕಿರಿಯರ ತಂಡ ವಿಶ್ವಕಪ್ ಗೆದ್ದಿತ್ತು.
ಭಾರತೀಯ ಕ್ರಿಕೆಟ್ ತಂಡವು 2013 ರಿಂದಲೂ ಕಪ್ ನ ಬರ ನೀಗಿಸಲು ಆಗುತ್ತಿಲ್ಲ. ಪ್ರತಿ ಐಸಿಸಿ ಟ್ರೋಫಿಯಲ್ಲಿಯೂ ಭಾರತ ನಾಕೌಟ್ ಸುತ್ತು ಹಾಗೂ ಫೈನಲ್ ಪ್ರವೇಶಿಸಿದರೂ ಸೋಲು ಕಂಡಿದೆ.
ಮಹಿಳಾ ಕ್ರಿಕೆಟ್ ತಂಡ ಕೂಡ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕಪ್ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಕಿರಿಯರ ತಂಡವು ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ವಿಶ್ವಕಪ್ ಫೈನಲ್ ಪ್ರವೇಶಿಸಿದರೂ ಮೂರು ಬಾರಿಯೂ ಸೋಲು ಕಂಡಿದೆ.
ಮಹಿಳಾ ಕ್ರಿಕೆಟ್ ತಂಡವು ಇದುವರೆಗೂ 2005 ಹಾಗೂ 2007ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶ ಮಾಡಿತ್ತು. ಈ ಬಾರಿ ವಿಶ್ವಚಾಂಪಿಯನ್ ಆಗುವ ಕನಸು ಹೊತ್ತು ನ್ಯೂಜಿಲೆಂಡ್ ನೆಲಕ್ಕೆ ಕಾಲಿಟ್ಟಿದೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ಪುರುಷರ ತಂಡವು, ಮತ್ತೆ ಆ ಪ್ರಶಸ್ತಿ ಗೆದ್ದಿಲ್ಲ.
2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಭಾರತೀಯ ಹಿರಿಯ ಪುರುಷರ ತಂಡ ಇದುವರೆಗೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ವರ್ಷ ಒಟ್ಟು ಮೂರು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಭಾರತದ ಮುಂದೆ ಇದೆ. ಇದರಲ್ಲಿ ಭಾರತ ಗೆಲ್ಲಲಿ ಎಂಬುವುದು ಭಾರತೀಯರ ಆಸೆಯಾಗಿದೆ.