
ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಕನ್ನು ತಂದಿದೆ. ಹೊಸ ದಿನ ಹೊಸ ಸೂರ್ಯೋದಯಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದು?
2022 ರ ಮೊದಲ ಸೂರ್ಯೋದಯದ ಈ ಫೋಟೋಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋಗಳು ವೈರಲ್ ಆಗಿದೆ.
ಈ ಫೋಟೋಗಳ ಜೊತೆಗೆ ‘ಹೊಸ ವರ್ಷದ ಶುಭಾಶಯಗಳು! ನಿಲ್ದಾಣದ ಸಿಬ್ಬಂದಿ ದಿನಕ್ಕೆ 16 ಸೂರ್ಯೋದಯಗಳನ್ನು ನೋಡುತ್ತಾರೆ ಮತ್ತು ಅವರು ಅಧಿಕೃತವಾಗಿ 2022 ಅನ್ನು GMT 12 ಗಂಟೆಗೆ ಪ್ರಾರಂಭಿಸಿದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಾಣುವ ಸುಂದರ ಸೂರ್ಯೋದಯದ ಸುಂದರ ಫೋಟೋಗಳು ಖಂಡಿತವಾಗಿಯೂ ನಿಮ್ಮನ್ನು ಮೋಡಿಮಾಡುತ್ತವೆ ಎಂದು ಹೇಳಲಾಗಿದೆ.
ಜನವರಿ 1 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಈ ಫೋಟೋಗಳು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅಪಾರ ಸಂಖ್ಯೆಯ ಜನ ಲೈಕ್ ಕಾಮೆಂಟ್ ಮಾಡಿದ್ದಾರೆ.
‘ಅದ್ಭುತ. ನಾನು ನಿಜವಾಗಿಯೂ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಬಾಹ್ಯಾಕಾಶ ನಿಲ್ದಾಣದಿಂದ ವೀಕ್ಷಿಸಲು ಬಯಸುತ್ತೇನೆ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ನೋಟ ಅದ್ಭುತವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ನಿಜವಾಗಿಯೂ ಸೂರ್ಯಾಸ್ತದಂತೆ ಕಾಣುತ್ತದೆ ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.