ಆಟವಾಡುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ 02-01-2022 5:28PM IST / No Comments / Posted In: Latest News, India, Live News ನಾಯಿಗಳ ಗುಂಪೊಂದು ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನ ಹಿಂಬಾಲಿಸಿ, ನೆಲದಲ್ಲಿ ಎಳೆದಾಡಿ, ಕಚ್ಚಿ ಗಾಯಗೊಳಿಸಿರುವ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಾಯಿಗಳು ಬಾಲಕಿಯನ್ನ ಕಚ್ಚುತ್ತಿರುವುದನ್ನ ಕಂಡ ದಾರಿ ಹೋಕನೊಬ್ಬ ನಾಯಿಗಳನ್ನ ಅಲ್ಲಿಂದ ಓಡಿಸಿದ್ದಾನೆ. ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಬಾಲಕಿ, ಆ ಪ್ರದೇಶದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕನ ಮಗಳು. ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆಕೆಯ ಮೇಲೆ ನಾಯಿಗಳ ದಾಳಿ ನಡೆದಿದೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ ನಾಯಿಗಳು ಆಕೆಯನ್ನು ಸುತ್ತುವರಿದು ಆಕೆಯ ತಲೆ, ಹೊಟ್ಟೆ ಮತ್ತು ಕಾಲುಗಳನ್ನ ಕಚ್ಚಿವೆ. ನಂತರ ಅವಳನ್ನು ನೆಲಕ್ಕೆ ಎಳೆದು, ಮತ್ತೆ ಆಕೆಯ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿರುವುದನ್ನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳಲ್ಲಿ ನೋಡಬಹುದು. ಕೆಲವು ನಿಮಿಷಗಳ ದಾಳಿಯ ನಂತರ, ದಾರಿಹೋಕನು ಮಧ್ಯ ಪ್ರವೇಶಿಸಿ ನಾಯಿಗಳನ್ನ ಓಡಿಸಿದ್ದಾನೆ. ಕಳೆದ ವರ್ಷ, ಕೊಹೆಫಿಜಾ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಆಕೆಯ ತಾಯಿಯ ಸಮ್ಮುಖದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದ್ದವು. 2019 ರಲ್ಲಿ, ಆರು ವರ್ಷದ ಬಾಲಕನನ್ನು ಅರ್ಧ ಡಜನ್ ಬೀದಿನಾಯಿಗಳು ಅವನ ತಾಯಿಯ ಮುಂದೆ ಕಚ್ಚಿ ಸಾಯಿಸಿದ್ದವು. ಬಾಲಕನ ತಾಯಿ ಆತನನ್ನು ರಕ್ಷಿಸಲು ಯತ್ನಿಸಿದಾಗ ತೀವ್ರವಾಗಿ ಗಾಯಗೊಂಡಿದ್ದರು. ಭೋಪಾಲ್ನಲ್ಲಿ ಬೀದಿ ನಾಯಿಗಳ ಕಾಟ ದಿನೇದಿನೇ ಹೆಚ್ಚಾಗುತ್ತಿದೆ. ವರದಿಗಳ ಪ್ರಕಾರ, ಭೋಪಾಲ್ನಲ್ಲಿ 1 ಲಕ್ಷ ಬೀದಿ ನಾಯಿಗಳಿವೆ. Horrific! Stray dogs mauled a 4 year old girl in Bhopal a passerby threw stones at the dogs and chased them away. The child has been hospitalized with severe injuries. pic.twitter.com/X4EyruZxra — Anurag Dwary (@Anurag_Dwary) January 2, 2022