alex Certify ಈ ವರ್ಷ ಪ್ರೇಮ ಪತ್ರಗಳು ಹೆಚ್ಚು ಬಂದು, ಎಫ್ ಐ ಆರ್ ಕಡಿಮೆ ದಾಖಲಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕಂಗನಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಪ್ರೇಮ ಪತ್ರಗಳು ಹೆಚ್ಚು ಬಂದು, ಎಫ್ ಐ ಆರ್ ಕಡಿಮೆ ದಾಖಲಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಕಂಗನಾ….!

ಬಾಲಿವುಡ್ ನಟಿ ಕಂಗನಾ ರಣಾವತ್ ಗೆ 2022ರಲ್ಲಿ ಹೆಚ್ಚು ಪ್ರೇಮ ಪತ್ರಗಳು ಬರಬೇಕಂತೆ. ಅಲ್ಲದೇ, ಈ ವರ್ಷ ಕಡಿಮೆ ಪೊಲೀಸ್ ದೂರು ದಾಖಲಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದರೊಂದಿಗೆ ಅವರ ವಿರೋಧಿಗಳಿಗೂ ದೇವರು ಕರುಣೆ ತೋರಿಸಲಿ ಎಂದು ಕೂಡ ಬರೆದುಕೊಂಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ನಟಿ ಕಂಗನಾ ರಾಣಾವತ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ಆ ನಂತರ ಅಲ್ಲಿಯೇ ಸಮೀಪದ ರಾಹು – ಕೇತು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡುವುದರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಕಂಗನಾ, ನಾನು, ರಾಹು – ಕೇತು ದೇವಸ್ಥಾನದಲ್ಲಿ ಕೆಲವು ಪೂಜೆಗಳನ್ನು ಮಾಡಿದ್ದೇನೆ. ರಾಹು ಕೇತು ದೇವಸ್ಥಾನ ಜಗತ್ತಿನಲ್ಲಿ ಒಂದೇ ಒಂದು ಇದೆ. ಅದೇ ದೇವಸ್ಥಾನಕ್ಕೆ ನಾನು ಭೇಟಿ ನೀಡಿದ್ದೆ ಎಂದು ಬರೆದುಕೊಂಡಿದ್ದಾರೆ.

ನೇರವಾಗಿ ಮಾತನಾಡುವ ಕಂಗನಾ, ತಮಗೆ ಅನಿಸದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಿಡುತ್ತಾರೆ. ಅವರ ಹಲವು ಹೇಳಿಕೆಗಳ ವಿರುದ್ಧ ದೇಶದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿವೆ. ಅಲ್ಲದೇ, ಹಲವು ವಿಷಯವಾಗಿ ಅವರ ಮೇಲೆ ದೂರುಗಳು ಕೂಡ ದಾಖಲಾಗಿವೆ. ಹೀಗಾಗಿ ಅವರಿಗೆ ಶತ್ರು ಬಳಗವೂ ಇದೆ, ಬೆಂಬಲಿಸುವ ಬಳಗವೂ ಇದೆ. ಈ ನಿಟ್ಟಿನಲ್ಲಿ ಶತ್ರುಗಳಿಗೆ ದೇವರು ಬುದ್ಧಿ ನೀಡಲಿ, ನನಗೆ ಪ್ರೇಮ ಪತ್ರ ಈ ವರ್ಷ ಹೆಚ್ಚು ಬರಲಿ ಎಂದು ಬರೆದುಕೊಂಡಿದ್ದಾರೆ.

ನಟಿ ಕಂಗನಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ಅವರ ಅಭಿನಯದ ಧಾಕಡ್ ಚಿತ್ರ ಸದ್ಯದಲ್ಲಿಯೇ ತೆರೆಗೆ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...