ನವದೆಹಲಿ: ದೇಶದ ತೈಲ ಮತ್ತು ಅನಿಲ ಸಂಸ್ಥೆಗಳಲ್ಲಿ ಮಹಿಳೆಯರ ಕೊಡುಗೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದಾರೆ.
ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಮಹಿಳಾ ಉದ್ಯೋಗಿಗಳ ಫೋಟೋಗಳನ್ನು ಸಚಿವರು ಹಂಚಿಕೊಂಡಿದ್ದಾರೆ. ಮಹಿಳೆಯರು ಸುರಕ್ಷತಾ ಸಾಧನ ಧರಿಸಿ ಪುರುಷರಿಗಿಂತ ತಾವೇನು ಕಡಿಮೆಯಿಲ್ಲ ಎಂಬಂತೆ ಕೆಲಸ ಮಾಡುತ್ತಿರುವ ಚಿತ್ರಣವನ್ನು ತಮ್ಮ ಇನ್ಟ್ಸಾಗ್ರಾಂನಲ್ಲಿ ಸಚಿವರು ಹಂಚಿಕೊಂಡಿದ್ದು, ದೇಶದ ಪ್ರಗತಿಯಲ್ಲಿ ಸಮಾನ ಪಾಲುದಾರರು ಎಂದು ಶ್ಲಾಘಿಸಿದ್ದಾರೆ. ಹಾಗೆಯೇ ತೈಲ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರನ್ನು ಸೂಪರ್ ವುಮೆನ್ ಎಂದು ಕರೆದಿದ್ದಾರೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಪೋಸ್ಟ್ ಅನ್ನು ನೆಟ್ಟಿಗರು ಕೂಡ ಇಷ್ಟಪಟ್ಟಿದ್ದಾರೆ. ಸಚಿವರ ಪೋಸ್ಟ್ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಅಂತೆಲ್ಲಾ ಶ್ಲಾಘಿಸಿದ್ದಾರೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹಿಳೆಯರನ್ನು ನಾಯಕತ್ವದ ವಿಚಾರದಲ್ಲಿ ಸಬಲೀಕರಣಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಲಡಾಖ್‌ನ ಫೇ ಗ್ರಾಮದಲ್ಲಿ 11,800 ಅಡಿ ಎತ್ತರದಲ್ಲಿರುವ ಅತಿ ಎತ್ತರದ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗಳ ಒಂದರಲ್ಲಿ ಇಂಡಿಯನ್ ಆಯಿಲ್‌ನ ಮಹಿಳಾ ಉದ್ಯೋಗಿಗಳ ಕಾರ್ಯ ನಿರ್ವಹಿಸುತ್ತಿದ್ದಾರೆ.