ದಿವಂಗತ ಸುಶಾಂತ್ ಸಿಂಗ್ ರಜಪುತ್ ಅವ್ರು ಬದುಕಿರುವಾಗ ಅದೆಷ್ಟು ಅಭಿಮಾನಿಗಳಿದ್ರೊ, ಅವರ ಮರಣಾನಂತರ ಅವ್ರ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಟ್ವಿಟ್ಟರ್ ತೆರೆದು ನೋಡಿದ್ರೆ ವಾರದಲ್ಲಿ ಒಂದೆರಡು ಬಾರಿಯಾದ್ರು ಸುಶಾಂತ್ ಹೆಸರು ಟ್ರೆಂಡಿಂಗ್ ಸೆಕ್ಷನ್ ನಲ್ಲಿರುತ್ತದೆ. ಅವರ ಸಾವಿನಿಂದ ಅಭಿಮಾನಿಗಳು ಈಗಲೂ ದುಃಖದಲ್ಲಿದ್ದಾರೆ. ಹೀಗಿರುವಾಗ ಅವರ ಅಧಿಕೃತ ಫೇಸ್‌ಬುಕ್ ಖಾತೆಯಿಂದ ಹೊಸ ವರ್ಷದ ಶುಭಾಶಯ ಬಂದಿದೆ.
ಇದನ್ನ ನೋಡಿದ ಅವರ ಅಭಿಮಾನಿಗಳು ಒಂದು ಕ್ಷಣ ಗೊಂದಲಕ್ಕೊಳಗಾಗಿದ್ದಂತು ಸತ್ಯ. ಅದ್ರ ಜೊತೆಗೆ ಎಷ್ಟೋ ಜನರು ಅವರನ್ನ ನೆನೆದು ಭಾವನಾತ್ಮಕರಾಗಿದ್ದಾರೆ. ಸುಶಾಂತ್ ರವರ ಸಹೋದರಿ ಶ್ವೇತಾ ಸಿಂಗ್ ತನ್ನ ಸಹೋದರ ಅಧಿಕೃತ ಹ್ಯಾಂಡಲ್ ನಿಂದ ಅವರ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನ ತಿಳಿಸಿದ್ದಾರೆ. ನನ್ನ ಸಹೋದರನ ಪರವಾಗಿ ಈ ಶುಭಾಶಯ ತಿಳಿಸುತ್ತಿದ್ದೇನೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಎಲ್ಲವು ಉತ್ತಮವಾಗಲಿ ಎಂದು ಕೆಂಪು ಹೃದಯದ ಇಮೋಜಿಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್ ನೋಡಿದ ಹಲವಾರು ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ, ನಟನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಕ್ಷಣ ನನಗೆ ಆಶ್ಚರ್ಯವಾಯಿತು. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸುಶಾಂತ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಪ್ರೀತಿಯ ಸುಶಾಂತ್ ಖಾತೆಯಿಂದ ‘SSRains’ ಕುಟುಂಬ ಮತ್ತು ಇತರರಿಗೆ ಶುಭಾಶಯ ಹೇಳಿದ್ದಕ್ಕೆ ಧನ್ಯವಾದಗಳು. ಸುಶಾಂತ್ ಅವರನ್ನು ಯಾರೂ ಮರೆಯುವುದಿಲ್ಲ, ಅವರು ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತಾರೆ ಎಂದು ಇನ್ನೊಬ್ಬ ಅಭಿಮಾನಿ ಶ್ವೇತಾ ಸಿಂಗ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಹೊಸ ವರ್ಷದಂದೆ ಸುಶಾಂತ್ ಅವರ ಫೇಸ್‌ಬುಕ್ ಖಾತೆಯ ಡಿಸ್ಪ್ಲೇ ಚಿತ್ರವನ್ನು ಸಹ ಬದಲಾಯಿಸಲಾಗಿತ್ತು, ಇದು ಅಭಿಮಾನಿಗಳಿಗೆ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡಿತು.