ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್ನಲ್ಲಿ ಘೋಷಿಸಲಾಗಿದೆ.
ವಾಹನದ ಟೀಸರ್ ತೋರಿಸಿದ ಕಿಯಾ ಇಂಡಿಯಾ, “ಬೇರೊಂದು ಜಗತ್ತಿನ ಬಾಹ್ಯಯುಗದ ಅನುಭವ ಪಡೆಯಲು ನಿಮ್ಮ ಸೀಟ್ಬೆಲ್ಟ್ ಕಟ್ಟಿಕೊಳ್ಳಲು ಸಜ್ಜಾಗಿ. ಹೊಚ್ಚ ಹೊಸ ಕಿಯಾ ಕಾರೆನ್ಸ್ ಭೇಟಿ ಮಾಡಲು ಸಜ್ಜಾಗಿ; ಜನವರಿ 14, 22ರಿಂದ ಬುಕಿಂಗ್ ಆರಂಭಗೊಳ್ಳಲಿದೆ,” ಎಂದು ಪೋಸ್ಟ್ ಮಾಡಿದೆ.
ಬಹೋಪಯೋಗಿ ವಾಹನ (ಎಂಪಿವಿ) ಆಗಿರುವ ಕಿಯಾ ಕಾರೆನ್ಸ್ ಭಾರತದಲ್ಲಿ ಕಂಪನಿ ಬಿಡುಗಡೆ ಮಾಡಿರುವ ಇಂಥ ವರ್ಗದ ಮೊದಲ ಕಾರಾಗಿದೆ. ಆಂಧ್ರ ಪ್ರದೇಶದ ಅನಂತಪುರದ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಕಾರೆನ್ಸ್ ಜಗತ್ತಿನ ಬೇರೆಡೆಗಳಲ್ಲಿ ಬಿಡುಗಡೆಯಾಗುವ ಮುನ್ನ ಭಾರತದಲ್ಲಿ ಬಿಡುಗಡೆ ಆಗುತ್ತಿದೆ.
ಎಟಿಎಂ ಸೇವಾ ಶುಲ್ಕ ಹೆಚ್ಚಳ: ನಿಮಗೆ ತಿಳಿದಿರಲಿ ಹೆಚ್ಚುವರಿ ಪಾವತಿಸಬೇಕಾದ ಮೊತ್ತದ ಮಾಹಿತಿ
ಕಾರ್ನಿವಾಲ್, ಸಾನೆಟ್ ಮತ್ತು ಸೆಲ್ಟೋಸ್ ಕಾರುಗಳ ಮೂಲಕ ಅದಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನಮಾನ ವ್ಯಾಪಿಸಿಕೊಂಡಿರುವ ಕಿಯಾ, ಇದೀಗ ನಾಲ್ಕನೇ ಕಾರಿನ ಬಿಡುಗಡೆಗೆ ಸಜ್ಜಾಗಿದೆ.
1.4ಲೀ ಟರ್ಬೋ ಪೆಟ್ರೋಲ್ ಮತ್ತು 1.5ಲೀ ಡೀಸೆಲ್ ಇಂಜಿನ್ಗಳ ವರ್ಶನ್ಗಳಲ್ಲಿ ಈ ಕಾರು ಲಭ್ಯವಿರಲಿದೆ. 138ಬಿಎಚ್ಪಿ ಶಕ್ತಿ ಮತ್ತು 242ಎನ್ಎಂಗಳ ಗರಿಷ್ಠ ಟಾರ್ಕ್ ಅನ್ನು ಪೆಟ್ರೋಲ್ ಇಂಜಿನ್ ಉತ್ಪಾದಿಸುತ್ತದೆ. ಇದೇ ವೇಳೆ ಡೀಸೆಲ್ ಇಂಜಿನ್ನಿಂದ 113ಬಿಚ್ಪಿ ಶಕ್ತಿ ಮತ್ತು 144 ಎನ್ಎಂ ಟಾರ್ಕ್ ಉತ್ಪಾದನೆಯಾಗಲಿದೆ.
7-ಸ್ಪೀಡ್ ಡ್ಯುಯಲ್ ಕ್ಲಚ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಆಯ್ಕೆಗಳ ಗಿಯರ್ ವ್ಯವಸ್ಥೆಯನ್ನು ಈ ಕಾರು ಹೊಂದಿದೆ.
ಕಾರಿನ ಒಳಾಂಗಣದಲ್ಲಿ 10.25 ಇಂಚು ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆಯನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಪೋರ್ಟ್ನೊಂದಿಗೆ ನೀಡಲಾಗಿದೆ.