alex Certify ಒಮಿಕ್ರಾನ್‌ ಆತಂಕದ ಮಧ್ಯೆ ಕೊರೊನಾ ಕುರಿತು ತಜ್ಞರಿಂದ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್‌ ಆತಂಕದ ಮಧ್ಯೆ ಕೊರೊನಾ ಕುರಿತು ತಜ್ಞರಿಂದ ಗುಡ್‌ ನ್ಯೂಸ್

ಓಮಿಕ್ರಾನ್​ ರೂಪಾಂತರಿಯು ದೇಶಾದ್ಯಂತ ಹರುಡುತ್ತಿರುವ ವೇಗವನ್ನು ನೋಡಿದರೆ ಹೊಸ ಕೋವಿಡ್​ 19 ರೂಫಾಂತರಿಯು ಮಹಾಮಾರಿಯಿಂದ ಒಂದು ಸ್ಥಳೀಯ ಕಾಯಿಲೆಯಾಗಿದೆ ಪರಿವರ್ತನೆ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓಮಿಕ್ರಾನ್​ ಕೊರೊನಾ ರೂಪಾಂತರಿಯು ಮಹಾಮಾರಿಯನ್ನು ಒಂದು ಸ್ಥಳೀಯ ಸಾಂಕ್ರಾಮಿಕ ರೋಗವನ್ನಾಗಿ ಪರಿವರ್ತಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ, ಅಂದರೆ ಓಮಿಕ್ರಾನ್​ ಹೆಚ್ಚಾಗಿ ಹರಡುತ್ತದೆ, ಲಸಿಕೆಯನ್ನು ಸ್ವೀಕರಿಸದ ಜನರನ್ನು ಹೆಚ್ಚಾಗಿ ಟಾರ್ಗೆಟ್​ ಮಾಡುತ್ತದೆ.

ಅಲ್ಲದೇ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹಾಗೂ ಕೋವಿಡ್​ ಸಾವುಗಳು ಕೂಡ ಹೆಚ್ಚಾಗಬಹುದು ಆದರೆ ಕೋವಿಡ್​ ನಿಂದ ಚೇತರಿಸಿಕೊಂಡವರು ನೈಸರ್ಗಿಕವಾಗಿ ಪ್ರತಿರಕ್ಷಕಗಳನ್ನು ತಮ್ಮ ದೇಹದಲ್ಲಿ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್​​ ಹಾಗೂ ವೈರಲಾಜಿಸ್ಟ್​ ಡಾ. ಡೇವಿಡ್ ಹೋ ನೀಡಿರುವ ಮಾಹಿತಿಯ ಪ್ರಕಾರ ಕಳೆದ ಕೆಲ ವರ್ಷಗಳಲ್ಲಿ ಕೋವಿಡ್​ ಅನೇಕ ರೀತಿಯ ತಿರುವುಗಳನ್ನು ಕಂಡಿದೆ. ಉದಾಹರಣೆಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕೋವಿಡ್​ ಓಮಿಕ್ರಾನ್​ ರೂಪಾಂತರಿ ಪತ್ತೆಯಾಗಿತ್ತು. ಇದಾದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದರೂ ಸಹ ಅಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇನ್ನೂ ಇಳಿಮುಖವಾಗಿಯೇ ಇದೆ. ಆ ದೇಶದ ಲಸಿಕೆ ಅಭಿಯಾನದ ಪ್ರಮಾಣ ಹಾಗೂ ಅಲ್ಲಿನ ಹವಾಮಾನ ಇಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಲೈಸೆಸ್ಟರ್​ ವಿಶ್ವವಿದ್ಯಾಲಯದ ಪ್ರೊಫೆಸರ್​ ಡಾ.ಜ್ಯೂಲಿಯನ್​ ಟಾಂಗ್, ಕೊರೊನಾ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರೋದಕ್ಕೆ ಓಮಿಕ್ರಾನ್​ ಮೊದಲ ಉದಾಹರಣೆಯಾಗಿದೆ. ಓಮಿಕ್ರಾನ್​ ಸೋಂಕಿತರಲ್ಲಿ ಗಂಭೀರ ಲಕ್ಷಣಗಳು ಗೋಚರವಾಗುತ್ತಿಲ್ಲ. ಇದು ಕೊರೊನಾ ವೈರಸ್​ ಮಾನವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...