
ನವದೆಹಲಿ: ನವಭಾರತ ದೊಡ್ಡದಾಗಿ ಯೋಚನೆ ಮಾಡುತ್ತದೆ. 2021ರಲ್ಲಿ ಅಭಿವೃದ್ಧಿ ಪಯಣದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶ ತನ್ನ ಅಸ್ತಿತ್ವ ಏನೆಂಬುದನ್ನು ತೋರಿಸಿಕೊಟ್ಟಿದೆ. ಸಮಾಜದ ಪ್ರತಿ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಿದೆ. ಆ ಕ್ಷಣಗಳನ್ನು ಒಮ್ಮೆ ಅವಲೋಕಿಸಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನಮೋ ಆಪ್ ನಲ್ಲಿ ಆ ಕ್ಷಣಗಳನ್ನು ಪರಿಶೀಲಿಸಬೇಕೆಂದು ಹೇಳಿದ್ದು, ವಿಶೇಷ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. 2021ರ ಮಹತ್ವದ ಕ್ಷಣಗಳನ್ನು ಪ್ರಧಾನಿ ಮೋದಿ ಶೇರ್ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ
ವಿಐಪಿ ಸಂಸ್ಕೃತಿಯನ್ನು ಬಿಟ್ಟು ಲಸಿಕೆ ಪಡೆದ ಫೋಟೋ
ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರ ಜೊತೆಗಿನ ಕ್ಷಣಗಳು
ನೂತನ ಸಂಸತ್ ಭವನದ ಕಟ್ಟಡ ಕಾಮಗಾರಿ ವೀಕ್ಷಣೆ
ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆಯ ಕ್ಷಣಗಳು
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮೋದಿ ಭೇಟಿಯಾದ ಕ್ಷಣಗಳು ಸೇರಿದಂತೆ ಹಲವು ಫೋಟೊಗಳನ್ನು ಪ್ರಧಾನಿ ಮೋದಿ ಅಪ್ ಲೋಡ್ ಮಾಡಿದ್ದಾರೆ.