ಪಾನಿಪುರಿ ಅಥವಾ ಗೋಲ್ಗಪ್ಪಾ ಭಾರತೀಯರು ಹೆಚ್ಚು ಇಷ್ಟಪಡುವ ಸ್ಟ್ರೀಟ್ ಫುಡ್ ಗಳಲ್ಲಿ ಒಂದಾಗಿದೆ. ಅನೇಕ ಮಂದಿ ಪಾನಿಪುರಿ ಸವಿಯಲು ತಮ್ಮ ಫೇವರಿಟ್ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲೋಕು ರೆಡಿ ಇರುತ್ತಾರೆ. ಹಾಗೆಯೇ ಇಲ್ಲೊಬ್ಬಳು ತಿಂಡಿಪೋತಿ ವಧು, ತನ್ನ ಮದುವೆಯಂದು ಕೂಡ ಪಾನಿಪುರಿ ಸವಿದಿದ್ದಾಳೆ.
ಹೌದು, ವಿವಾಹದ ಸಂಪ್ರದಾಯಗಳೆಲ್ಲಾ ಮುಗಿದ ಬಳಿಕ ವಧು-ವರರು ಊಟ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ವಧು-ವರ ಪಾನಿಪುರಿ ತಿನ್ನಲು ನಿಂತಿರುವ ವಿಡಿಯೋ ವೈರಲ್ ಆಗಿದೆ.
ವಧುವಿಗೆ ಪಾನಿಪುರಿಯನ್ನು ನೀಡಿದಾಗ, ತನ್ನ ಗಂಡನ ಕಡೆಗೆ ತಿರುಗಿ ಇದು ಗೋಧಿಯಿಂದ ಮಾಡಲ್ಪಟ್ಟಿದೆ. ಇದು ತನಗೆ ಬೇಡ ಎಂದು ನಿರಾಕರಿಸಿದ್ದಾಳೆ. ವಧುವಿನ ಮಾತು ಕೇಳಿದ ನೆರೆದಿದ್ದವರು ನಗೆಗಡಲಲ್ಲಿ ತೇಲಿದ್ದಾರೆ. ಸ್ವಲ್ಪ ಸಮಯದ ನಂತರ ವಧು ರವೆಯಿಂದ ಮಾಡಿರುವ ಪಾನಿಪುರಿಯನ್ನು ಸವಿದಿದ್ದಾಳೆ.
ಈ ವಿಡಿಯೋವನ್ನು ಸ್ವತಃ ವಧು ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋವನ್ನು ಇಷ್ಟಪಟ್ಟಿದ್ದು, ಕಮೆಂಟ್ ವಿಭಾಗವನ್ನು ಪ್ರೀತಿ ಹಾಗೂ ಹೃದಯದ ಎಮೋಜಿಯಿಂದ ತುಂಬಿದ್ದಾರೆ.