alex Certify ಆಪ್​​ ಸೇರ್ಪಡೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​​ ಸಹೋದರಿ ಅಂಜು ಸೆಹ್ವಾಗ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್​​ ಸೇರ್ಪಡೆಯಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​​ ಸಹೋದರಿ ಅಂಜು ಸೆಹ್ವಾಗ್​​

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಸಹೋದರಿ ಅಂಜು ಸೆಹ್ವಾಗ್​​ ಆಮ್​ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ವಿರೇಂದ್ರ ಸೆಹ್ವಾಗ್​ ಸಹೋದರಿ ಅಂಜು ಸೆಹ್ವಾಗ್​​ ಆಮ್​ ಆದ್ಮಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಇವರು ದೆಹಲಿಯಲ್ಲಿ ಕಾಂಗ್ರೆಸ್​ನ ಮಾಜಿ ಕೌನ್ಸಿಲರ್​ ಆಗಿದ್ದರು. ಹಾಗೂ ವೃತ್ತಿಯಲ್ಲಿ ಶಿಕ್ಷಕಿ ಕೂಡ ಹೌದು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ಮಾಡಿದ ಜನಪರ ಕೆಲಸಗಳಿಂದ ಪ್ರೇರಿತರಾಗಿ ಅಂಜು ಸೆಹ್ವಾಗ್​​​ ತಮ್ಮ ಎಲ್ಲಾ ಬೆಂಬಲಿಗರ ಜೊತೆಯಲ್ಲಿ ಆಪ್​ ಸೇರ್ಪಡೆಯಾಗಿದ್ದಾರೆ ಎಂದು ಆಮ್​ ಆದ್ಮಿ ಪಕ್ಷ ಅಧಿಕೃತ ಟ್ವೀಟ್​ ಮಾಡಿದೆ.

ಅಂಜು ಸೆಹ್ವಾಗ್​ 2012ರಲ್ಲಿ ದೆಹಲಿಯ ಎಂಸಿಡಿ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾದ ದಕ್ಷಿಣಪುರಿ ಎಕ್ಸ್ಟೆಂಷನ್​​ನಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಆರತಿ ದೇವಿಯನ್ನು 558 ಮತಗಳ ಅಂತರದಿಂದ ಸೋಲಿಸಿದ್ದರು.

ಅಂಜು ಸೆಹ್ವಾಗ್​ ಲಕ್ಷ್ಮಣ ಪಬ್ಲಿಕ್​ ಸ್ಕೂಲ್​​ನಲ್ಲಿ ಹಿಂದಿ ಶಿಕ್ಷಕಿಯಾಗಿದ್ದರು. ಅವರು ಎರಡು ಮಕ್ಕಳ ತಾಯಿ ಕೂಡ ಹೌದು. ಕಾಂಟ್ರ್ಯಾಕ್ಟರ್​​ ರವೀಂದರ್​ ಸಿಂಗ್​​ರನ್ನು ವಿವಾಹವಾಗಿದ್ದ ಅಂಜು ಬಳಿಕ 2000ದಲ್ಲಿ ನಜಾಫ್​ಗಢದಿಂದ ಮದನ್​ಗಿರಿಗೆ ಶಿಫ್ಟ್​ ಆಗಿದ್ದಾರೆ.

ಅಂಜು ಕುಟುಂಬವು ದಶಕಗಳಿಂದ ಕಾಂಗ್ರೆಸ್​​ನ್ನು ಬೆಂಬಲಿಸಿದೆ ಹಾಗೂ ಇವರ ಕುಟುಂಬದಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.

— AAP (@AamAadmiParty) December 31, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...