alex Certify ಒಮಿಕ್ರಾನ್ ಹೆಚ್ಚಳದ ಬೆನ್ನಲ್ಲೆ ದೇಶದ ಜನತೆಗೆ ಮುಖ್ಯ ಸಂದೇಶ ರವಾನಿಸಿದ ಏಮ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಹೆಚ್ಚಳದ ಬೆನ್ನಲ್ಲೆ ದೇಶದ ಜನತೆಗೆ ಮುಖ್ಯ ಸಂದೇಶ ರವಾನಿಸಿದ ಏಮ್ಸ್

ಭಾರತದ ಓಮಿಕ್ರಾನ್ ಸಂಖ್ಯೆಯು 1,000 ಕ್ಕೆ ಹತ್ತಿರವಾಗುತ್ತಿದ್ದಂತೆ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ದೆಹಲಿಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ‘ಜಾಗರೂಕರಾಗಿರಿ ಮತ್ತು ಭಯಪಡಬೇಡಿ’ ಎಂದು ಕೇಳಿಕೊಂಡಿದ್ದಾರೆ. ತಮ್ಮ ಹೊಸ ವರ್ಷದ ಸಂದೇಶದಲ್ಲಿ, ಗುಲೇರಿಯಾ ಅವರು ಈ ಸಮಸ್ಯೆ ಎದುರಿಸಲು ಸಾರ್ವಜನಿಕರಿಗೆ ಹಲವು ವಿಷಯಗಳು, ತೆಗೆಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

ಸೆಕೆಂಡ್ ವೇವ್ ಸಮಯದಲ್ಲಿ ಮಾಡಿದಂತೆ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಔಷಧಿಗಳನ್ನು ಸಂಗ್ರಹಿಸಬೇಡಿ ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಈ ಬಾರಿಯು ದೇಶ ಮತ್ತದೆ ಭಿಕ್ಕಟ್ಟಿಗೆ ತಲುಪುತ್ತದೆ ಎಂದು ತಿಳಿಸಿದ್ದಾರೆ. ಅತ್ಯಂತ ಸಂತೋಷ, ಆರೋಗ್ಯಕರ ಮತ್ತು ಸಮೃದ್ಧಕರ ಹೊಸ ವರ್ಷ ಎಲ್ಲರ ಪಾಲಾಗಲಿ ಎಂದು ಹಾರೈಸುತ್ತೇನೆ, ಎಂದು ದೇಶದ ಜನರಿಗೆ ಶುಭಾಶಯ ತಿಳಿಸಿದ ಗುಲೆರಿಯಾ, ಸಾಂಕ್ರಾಮಿಕ ರೋಗ ಮುಗಿದಿಲ್ಲ, ಆದರೆ ಭಾರತದ ಸ್ಥಿತಿ ಉತ್ತಮವಾಗಿದೆ‌.

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ

ಫೇಸ್ ಮಾಸ್ಕ್ ಧರಿಸುವುದು, ದೈಹಿಕ ಅಂತರ ಮತ್ತು ಜನಸಂದಣಿಯನ್ನು ತಪ್ಪಿಸುವುದು ಸೇರಿದಂತೆ ಕೋವಿಡ್-ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯವರು ವ್ಯಾಕ್ಸಿನೇಷನ್‌ನಿಂದಾಗಿ ಅಥವಾ ನೈಸರ್ಗಿಕ ಸೋಂಕಿನಿಂದಾಗಿ ರೋಗನಿರೋಧಕ ಶಕ್ತಿಯನ್ನು ಪಡೆದಿದ್ದಾರೆ. ಯಾರು ಗಾಬರಿಯಾಗಬೇಡಿ, ಜಾಗರೂಕರಾಗಿರಿ” ಎಂದು AIIMS ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ‌.

ಒಮಿಕ್ರಾನ್ ಸೋಂಕಿನ ಸಂಖ್ಯೆ ರಾಷ್ಟ್ರದಾದ್ಯಂತ 961 ಕ್ಕೆ ಏರಿದೆ, 320 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಒಟ್ಟು 22 ರಾಜ್ಯಗಳಲ್ಲಿ ಹೊಸ ರೂಪಾಂತರವನ್ನು ಪತ್ತೆಯಾಗಿದೆ. ಇದೆಲ್ಲದರ ನಡುವೆ, ಭಾರತದಲ್ಲಿ 13,154 ಕೋವಿಡ್ ಪ್ರಕರಣಗಳು ಮತ್ತು 268 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...