alex Certify ಫುಟ್​ಬಾಲ್​ ಆಟಗಾರರಿಗೆ ಟ್ಯಾಟೂ ನಿಷೇಧ ಮಾಡಿ ಆದೇಶ ಹೊರಡಿಸಿದ ಬೋರ್ಡ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್​ಬಾಲ್​ ಆಟಗಾರರಿಗೆ ಟ್ಯಾಟೂ ನಿಷೇಧ ಮಾಡಿ ಆದೇಶ ಹೊರಡಿಸಿದ ಬೋರ್ಡ್​…..!

ಚೀನಾ ದೇಶದ ರಾಷ್ಟ್ರೀಯ ತಂಡದಲ್ಲಿ ಆಡುವ ಫುಟ್ಬಾಲ್ ಆಟಗಾರರಿಗೆ ಟ್ಯಾಟೂ ಹಾಕಿಸಿಕೊಳ್ಳುವುದನ್ನು ನಿರ್ಬಂಧಿಸಿದೆ. ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ ಆಫ್ ಚೀನಾ (GAS) ಈ ನಿರ್ದೇಶನವನ್ನು ಹೊರಡಿಸಿದ್ದು ಈಗಾಗಲೇ ಟ್ಯಾಟೂವನ್ನು ಹೊಂದಿರುವ ಆಟಗಾರರು ಅದನ್ನು ತೆಗೆಸಬೇಕು ಅಥವಾ ಅದನ್ನು ಮುಚ್ಚಿಕೊಳ್ಳಬೇಕು ಎಂದು ಹೇಳಿದೆ.

ಜನರಲ್​ ಅಡ್ಮಿನಿಸ್ಟ್ರೇಷನ್​​ ಆಫ್​ ಸ್ಪೋರ್ಟ್ಸ್​ ಆಫ್​ ಚೀನಾ ಹೊರಡಿಸಿರುವ ಈ ನಿರ್ದೇಶನವು ಚೀನಿ ಸಮಾಜಕ್ಕೆ ಉತ್ತಮ ಉದಾಹರಣೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಾಷ್ಟ್ರೀಯ ತಂಡ ಹಾಗೂ ಅಂಡರ್​ 23 ರಾಷ್ಟ್ರೀಯ ಫುಟ್​ಬಾಲ್​ ತಂಡದ ಆಟಗಾರರಿಗೆ ಹೊಸದಾಗಿ ಟ್ಯಾಟುಗಳನ್ನು ಹಾಕಿಸಿಕೊಳ್ಳುವುದಕ್ಕೆ ನಿರ್ದಿಷ್ಟವಾಗಿ ನಿರ್ಬಂಧ ಹೇರಲಾಗಿದೆ. ಈಗಾಗಲೇ ಟ್ಯಾಟೂ ಹೊಂದಿರುವವರು ಅದನ್ನು ತೆಗೆಸಬೇಕು ಅಥವಾ ಮುಚ್ಚಿಕೊಳ್ಳಬೇಕು ಎಂದು ಗ್ಯಾಸ್​ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ತರಬೇತಿ ಹಾಗೂ ಪಂದ್ಯಗಳ ಸಮಯದಲ್ಲಿ ಈಗಾಗಲೇ ಇರುವ ಹಚ್ಚೆಯನ್ನು ಮುಚ್ಚಿಕೊಳ್ಳಬೇಕು ಎಂದೂ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಸ್ಪೋರ್ಟ್ ಆಫ್ ಚೀನಾ ಹೇಳಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ರಾಷ್ಟ್ರೀಯ ತಂಡಗಳಲ್ಲಿ ದೇಶಭಕ್ತಿಯ ಶಿಕ್ಷಣವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜನರಲ್​ ಅಡ್ಮಿನಿಸ್ಟ್ರೇಷನ್​ ಆಫ್​ ಸ್ಪೋರ್ಟ್ಸ್​​ ಆಫ್​ ಚೀನಾ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...