ನವದೆಹಲಿ: ಕೇಂದ್ರ ಸರ್ಕಾರ ಜಿಎಸ್ಟಿ ರಿಟರ್ನ್ಸ್, EPFO ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಳಿಸುವ ಅವಧಿ ವಿಸ್ತರಣೆ ಮಾಡಿದೆ.
ಡಿಸೆಂಬರ್ 31 ರ ಇಂದು ಕೆಲವು ಹಣಕಾಸು ಸಂಬಂಧಿತ ಪ್ರಕ್ರಿಯೆ ಪೂರ್ಣಗೊಳಿಸಲು ಕೊನೆಯ ದಿನವಾಗಿತ್ತು. ಕಾರಣಾಂತರದಿಂದ ಕೇಂದ್ರ ಸರ್ಕಾರ ಗಡುವು ವಿಸ್ತರಣೆ ಮಾಡಿದೆ.
2020 -21ನೇ GST ರಿಟರ್ನ್ ಫೈಲಿಂಗ್ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅದನ್ನು ಫೆಬ್ರವರಿ 28 ರ ವರೆಗೆ ವಿಸ್ತರಿಸಲಾಗಿದೆ. 2021ರ ಮಾರ್ಚ್ 31ಕ್ಕೆ ಕೊನೆಯಾದ ಆರ್ಥಿಕ ವರ್ಷದ GST ಲೆಕ್ಕಪತ್ರವನ್ನು ಸರಿಪಡಿಸಿಕೊಂಡು GST ರಿಟರ್ನ್ ಸಲ್ಲಿಸಬೇಕಿದೆ.
ಕೆಲವು ನಿರ್ಬಂಧಿತ ಸಂಸ್ಥೆಗಳ ಬ್ಯಾಂಕ್ ಖಾತೆ ಕೆವೈಸಿ ಯನ್ನು ಮೂರು ತಿಂಗಳಿಗೊಮ್ಮೆ ಅಪ್ಡೇಟ್ ಮಾಡಬೇಕಿದೆ ಇದಕ್ಕಾಗಿ ಮಾರ್ಚ್ 31ರವರೆಗೆ ಅವಧಿ ವಿಸ್ತರಿಸಲಾಗಿದೆ.
ನೌಕರರ ಭವಿಷ್ಯನಿಧಿ ಸಂಸ್ಥೆ Epfo ಪಿಂಚಣಿ ಖಾತೆಗಳಿಗೆ ನಾಮಿನಿ ಹೆಸರು ನಾಮನಿರ್ದೇಶನಕ್ಕೆ ಗಡುವುದು ವಿಸ್ತರಣೆ ಮಾಡಲಾಗಿದ್ದು, ಆದಷ್ಟು ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ.