ನವದೆಹಲಿ: ಆರು ರಾಜ್ಯಗಳಿಗೆ NDRF ನಿಧಿ ಬಿಡುಗಡೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆರು ರಾಜ್ಯಗಳಿಗೆ 3063.21 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಗುಜರಾತ್ ಗೆ 1133.35 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಪಶ್ಚಿಮ ಬಂಗಾಳಕ್ಕೆ 586 ಕೋಟಿ ರೂ., ಅಸ್ಸಾಂಗೆ 51.53 ಕೋಟಿ ರೂ. ಹಾಗೂ ಕರ್ನಾಟಕ ರಾಜ್ಯಕ್ಕೆ 504.06 ಕೋಟಿ ರೂಪಾಯಿ, ಉತ್ತರಾಖಂಡ್ ರಾಜ್ಯಕ್ಕೆ 187.18 ಕೋಟಿ ರೂ. ಮಧ್ಯಪ್ರದೇಶಕ್ಕೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.