ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಾಸ್ ಟೇಲರ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ.
ಬರೋಬ್ಬರಿ 17 ವರ್ಷಗಳ ಸುದೀರ್ಘ ಕ್ರಿಕೆಟ್ ನಂಟಿಗೆ 37 ವರ್ಷದ ರಾಸ್ ಟೇಲರ್ ವಿದಾಯ ಹೇಳಿದ್ದು, ತವರು ನೆಲದಲ್ಲಿ ಇರುವ ಕೆಲವು ಸರಣಿ ಮುಗಿದ ಬಳಿಕ ವಿಶ್ರಾಂತಿ ಪಡೆಯಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಸ್ ಟೇಲರ್, ನ್ಯೂಜಿಲೆಂಡ್ ತವರು ನೆಲದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಎರಡು ಟೆಸ್ಟ್, ಆಸ್ಟ್ರೇಲಿಯಾ ಹಾಗೂ ನೆದರ್ ಲ್ಯಾಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿ ನಂತರ ಕ್ರಿಕೆಟ್ ಅಂಗಳದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿದೆ.
3 ಡಿಗ್ರಿ ಸೆಲ್ಸಿಯಸ್ ಗೆ ಕುಸಿದ ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನ..!
ರಾಸ್ ಟೇಲರ್ ಇಲ್ಲಿಯವರೆಗೂ 233 ಏಕದಿನ ಪಂದ್ಯಗಳನ್ನಾಡಿದ್ದು, 8,581 ರನ್ ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 21 ಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್ ನಲ್ಲಿ 7584 ರನ್ ಗಳನ್ನು ಗಳಿಸಿದ್ದು, 19 ಶತಕಗಳನ್ನು ಸಿಡಿಸಿದ್ದಾರೆ. 2006ರಲ್ಲಿ ಇವರು ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ನ್ಯೂಜಿಲೆಂಡ್ ಪರ ಏಕದಿನ ಹಾಗೂ ಟೆಸ್ಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿರುವ ರಾಸ್ ಟೇಲರ್, ಏಕಾಂಗಿಯಾಗಿ ಹಲವಾರು ಬಾರಿ ಹೋರಾಟ ನಡೆಸಿ, ತಂಡಕ್ಕೆ ಗೆಲುವಿನ ಸಿಹಿ ನೀಡಿದ್ದಾರೆ. ಇವರು ಕಣದಲ್ಲಿ ಇದ್ದರೆ, ಎದುರಾಳಿಗೆ ಢವ ಢವ ಎನ್ನುವಂತಹ ಸನ್ನಿವೇಶವನ್ನು ಪ್ರತಿಯೊಂದು ಪಂದ್ಯದಲ್ಲಿಯೂ ರಾಸ್ ಸೃಷ್ಟಿಸುತ್ತಿದ್ದರು.