alex Certify 3 ಡಿಗ್ರಿ ಸೆಲ್ಸಿಯಸ್ ಗೆ ಕುಸಿದ ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಡಿಗ್ರಿ ಸೆಲ್ಸಿಯಸ್ ಗೆ ಕುಸಿದ ರಾಷ್ಟ್ರ ರಾಜಧಾನಿಯ ಕನಿಷ್ಠ ತಾಪಮಾನ..!

ನವದೆಹಲಿಯ ಜನರು ದಿನೇದಿನೇ ಹೆಚ್ಚುತ್ತಿರುವ ಚಳಿಗೆ ತತ್ತರಿಸಿದ್ದಾರೆ. ಇಂದು ಸಹ ಚಳಿಗಾಲದ ಚಳಿ ತೀವ್ರಗೊಂಡಿದೆ‌. ಗುರುವಾರ ಅಂದ್ರೆ ಡಿಸೆಂಬರ್ 29ರಂದು ದೆಹಲಿಯ ಕನಿಷ್ಠ ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದು ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವ ಸೃಷ್ಟಿಸಿದೆ. ಡಿಸೆಂಬರ್ 20 ರಂದು, ಈ ಚಳಿಗಾಲದ ಸೀಸನ್ನಲ್ಲಿ ನಗರದ ಕನಿಷ್ಠ ತಾಪಮಾನ 3.1 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿತ್ತು. ಉತ್ತರ ಭಾರತದಾದ್ಯಂತ ಶೀತ ಗಾಳಿಯ ಅಲೆ ಬೀಸಿದ್ದರಿಂದ ಅದರ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಐದು ಹಂತಗಳನ್ನು ಕಡಿಮೆ ಮಾಡಿದೆ. ಇನ್ನುಳಿದಂತೆ ದಿನದ ಗರಿಷ್ಠ ತಾಪಮಾನವನ್ನು 21 ಡಿಗ್ರಿ ಸೆಲ್ಸಿಯಸ್ ಎಂದು ನಿಗದಿಪಡಿಸಲಾಗಿದೆ.

BIG NEWS: ರಾಜಧಾನಿಯಲ್ಲಿ ಕನ್ನಡಿಗರ ಕ್ರಾಂತಿ ಕಹಳೆ; ಒಂದೆಡೆ ಕರವೇ ಬೃಹತ್ ಪ್ರತಿಭಟನೆ; ಇನ್ನೊಂದೆಡೆ ನಾಳೆ ʼಕರ್ನಾಟಕ ಬಂದ್ʼ ಗೆ ವಾಟಾಳ್ ಪಣ

ಈ ಬಗ್ಗೆ ಮುನ್ಸೂಚನೆ ನೀಡಿರೋ ಭಾರತೀಯ ಹವಾಮಾನ ಇಲಾಖೆ, ಮುಂದಿನ‌ ದಿನಗಳಲ್ಲೂ ದೆಹಲಿಯಲ್ಲಿ ಚಳಿಯ ತೀವ್ರತೆ ಹೆಚ್ಚಬಹುದು ಎಂದು ಹೇಳಿದೆ. ಡಿ.29ರ ಬೆಳಿಗ್ಗೆ ಸಾಪೇಕ್ಷ ಆರ್ದ್ರತೆಯು 94 ಪ್ರತಿಶತದಷ್ಟು ದಾಖಲಾಗಿದೆ ಎಂದು IMD ತಿಳಿಸಿದೆ.

ದೆಹಲಿಯ ಗಾಳಿಯ ಗುಣಮಟ್ಟ(AQI) ಸತತ ಎರಡನೇ ದಿನ ‘ಮಧ್ಯಮ’ ವಿಭಾಗದಲ್ಲಿ ನೆಲೆಸಿದೆ. SAFAR ಅಂದಾಜಿನ ಪ್ರಕಾರ, ಗಾಳಿಯಲ್ಲಿನ PM10 (226) ಮತ್ತು PM2.5 (122) ಮಾಲಿನ್ಯಕಾರಕಗಳ ಮಟ್ಟವನ್ನು ‘ಮಧ್ಯಮ’ ಮತ್ತು ‘ಅತ್ಯಂತ ಕಳಪೆ’ ವಿಭಾಗಗಳಲ್ಲಿ ದಾಖಲಿಸಲಾಗಿದೆ. ಗಾಳಿಯ ಗುಣಮಟ್ಟ ಮತ್ತು ಹವಾಮಾನ ಬುಲೆಟಿನ್ ಪ್ರಕಾರ ದೆಹಲಿ AQI ಸ್ವಲ್ಪಮಟ್ಟಿಗೆ ಕ್ಷೀಣಿಸುವ ಸಾಧ್ಯತೆಯಿದೆ. ಮುಂದಿನ ಶುಕ್ರವಾರ ಮತ್ತು ಶನಿವಾರದಂದು ‘ಅತ್ಯಂತ ಕಳಪೆ’ ವರ್ಗದಲ್ಲಿ AQI ದಾಖಲಾಗಬಹುದು ಎಂಬ ಬುಲೆಟಿನ್ ರಿಲೀಸ್ ಆಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...