alex Certify 126 ಹುಲಿಗಳನ್ನ ಕಳೆದುಕೊಂಡ ಭಾರತ, ದಶಕದಲ್ಲೇ ಅತಿಹೆಚ್ಚು ಹುಲಿಗಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

126 ಹುಲಿಗಳನ್ನ ಕಳೆದುಕೊಂಡ ಭಾರತ, ದಶಕದಲ್ಲೇ ಅತಿಹೆಚ್ಚು ಹುಲಿಗಳ ಸಾವು

Tiger - Wikipedia

2021 ರಲ್ಲಿ ಒಟ್ಟು 126 ಹುಲಿಗಳು ಸಾವನಪ್ಪಿವೆ. ಇದು ಒಂದು ದಶಕದಲ್ಲೇ ಅತಿ ಹೆಚ್ಚು. ಈ ವರ್ಷದ ಡಿಸೆಂಬರ್ 29 ರವರೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(NTCA) ಮೂಲದ ಮಾಹಿತಿ ಪ್ರಕಾರ 126 ಹುಲಿಗಳಲ್ಲಿ, 60 ಹುಲಿಗಳು ಕಳ್ಳ ಬೇಟೆಗಾರರು, ಅಪಘಾತಗಳು ಮತ್ತು ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಬಲಿಯಾಗಿವೆ ಎಂದು ಬಹಿರಂಗಪಡಿಸಿದೆ.

2018 ರ ಜನಗಣತಿಯ ಪ್ರಕಾರ, ಭಾರತವು 2,967 ಹುಲಿಗಳಿಗೆ ನೆಲೆಯಾಗಿದೆ. NTCA 2012 ರಿಂದ ಸಾರ್ವಜನಿಕವಾಗಿ ಹುಲಿ ಸಾವಿನ ದಾಖಲೆಯನ್ನು ನಿರ್ವಹಿಸುತ್ತಿದೆ. ಸೆಪ್ಟೆಂಬರ್ 30 ರ ವೇಳೆಗೆ 99 ಕ್ಕೆ ತಲುಪಿದ್ದ ಸಂಖ್ಯೆ ಈಗ 126ಕ್ಕೇರಿದೆ‌. ಈ ಹಿಂದೆ 2016 ರಲ್ಲಿ 121 ಹುಲಿಗಳು ಸಾವನ್ನಪ್ಪಿದ್ದವು. ಈ ವರ್ಷದ ಅಂಕಿ ಅಂಶವು ಆತಂಕಕಾರಿಯಾಗಿದ್ದು, ವಿಶೇಷವಾಗಿ ಅರಣ್ಯ ಮೀಸಲುಗಳಂತಹ ಸ್ಥಳಗಳಲ್ಲಿ ಕಠಿಣ ಸುರಕ್ಷೆ ನೀಡುವ ಪ್ರಯತ್ನ ಮಾಡಿ ಎಂದು ತಜ್ಞರು ಕರೆ ನೀಡಿದ್ದಾರೆ.

ಪಾರ್ಲೆ- ಜಿ ಪ್ಯಾಕೆಟ್​ನಲ್ಲಿರುವ ‘ಜಿ’ ಎಂಬ ಪದದ ಅರ್ಥವೇನು..? ಪ್ಯಾಕೆಟ್​ನಲ್ಲಿ ಕಾಣುವ ಮಗು ಯಾರು..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ರಾಜ್ಯವಾರು ನೋಡುವುದಾದರೆ, 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶವು ಅತಿ ಹೆಚ್ಚು ನಷ್ಟವನ್ನು ಅನುಭವಿಸಿದೆ, ಅಂದರೆ ಎಂಪಿಯಲ್ಲಿ 42 ಹುಲಿಗಳು ಸಾವನ್ನಪ್ಪಿವೆ. ನಂತರದ ಸ್ಥಾನದಲ್ಲಿ 312 ಹುಲಿಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 26, ಮತ್ತು 524 ಹುಲಿಗಳಿಗೆ ತವರಾಗಿರುವ ಕರ್ನಾಟಕವು 15 ಹುಲಿಗಳನ್ನ ಕಳೆದುಕೊಂಡಿದೆ‌. ಸರಿಸುಮಾರು 173 ಹುಲಿಗಳಿರುವ ಉತ್ತರ ಪ್ರದೇಶದಲ್ಲಿ ಒಂಬತ್ತು ಸಾವುಗಳು ದಾಖಲಾಗಿದೆ. ಹೆಚ್ಚಿನ ಪರಿಶೀಲನೆಯ ನಂತರ NTCA ಡೇಟಾವನ್ನು ಅಪ್‌ಲೋಡ್ ಮಾಡುವುದರಿಂದ ಈ ಸಂಖ್ಯೆಗಳು ಹೆಚ್ಚಾಗಬಹುದು.

ಯುಪಿ ಅರಣ್ಯ ಇಲಾಖೆಯೊಂದಿಗೆ ಕೆಲಸ ಮಾಡುವ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಇವು ವರದಿಯಾಗಿರೋ ಸಾವಿನ ಸಂಖ್ಯೆಯಷ್ಟೆ, ಅರಣ್ಯ ಪ್ರದೇಶದೊಳಗೆ ಅನೇಕ ಹುಲಿಗಳು ನೈಸರ್ಗಿಕ ಕಾರಣಗಳಿಂದ ಸಾಯುತ್ತವೆ ಅವುಗಳ ಸಾವುಗಳು ವರದಿಯಾಗುವುದಿಲ್ಲ. 2021 ರಲ್ಲಿ ಭಾರತ ಕಳೆದುಕೊಂಡಿರುವ ಒಟ್ಟು ಹುಲಿಗಳ ಸಂಖ್ಯೆ ಹೆಚ್ಚಿರಬಹುದು. ಮಾನವ-ಪ್ರಾಣಿ ಸಂಘರ್ಷಗಳನ್ನು ತಗ್ಗಿಸಲು ಉತ್ತಮ ಸಂರಕ್ಷಣಾ ಯೋಜನೆಗಳನ್ನು ಖಚಿತಪಡಿಸಿಕೊಳ್ಳುವುದು ಈ ಸಮಯದ ಅಗತ್ಯವಾಗಿದೆ ಎಂಬುದು ಅವರ ಅಭಿಪ್ರಾಯ. ವನ್ಯಜೀವಿಗಳ ಆವಾಸಸ್ಥಾನಗಳು ಕಡಿಮೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಆತಂಕಕಾರಿಯಾಗಬಹುದು ಎಂದು ಅನೇಕ ತಜ್ಞರು ನಂಬಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...